Asianet Suvarna News Asianet Suvarna News

ಸಾಕ್ಷ್ಯಚಿತ್ರ ವಿವಾದದ ಬಗ್ಗೆ ಸೀತಾರಾಮ್ ಏನಂತಾರೆ?

(ತಮ್ಮ ಫೇಸ್‌ಬುಕ್ ಪುಟದಲ್ಲಿ ಸೀತಾರಾಮ್ ಅವರು ನೀಡಿರುವ ಯಥಾವತ್ ಸ್ಪಷ್ಟೀಕರಣ)

TN Seetharam Clarification About Vidhana Soudha Documentaries

ವಜ್ರ ಮಹೋತ್ಸವ ದ ಅಂಗವಾಗಿ  ನನಗೆ ಸಾಕ್ಷ್ಯ ಚಿತ್ರಗಳನ್ನು ಮಾಡಲು ವಿಧಾನ ಮಂಡಳ ದವರು ಕೇಳಿರುವ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಲು ಇಷ್ಟ ಪಡುತ್ತೇನೆ.

ಮೊಟ್ಟ ಮೊದಲಿಗೆ, ನಾನು ಮಾಡಬೇಕೆಂದಿರುವ ಸಾಕ್ಷ್ಯ ಚಿತ್ರ ಒಂದಲ್ಲ... ಏಳು ಸಾಕ್ಷ್ಯ ಚಿತ್ರ ಗಳು, ಇವು ಮಾಮೂಲಿ ಸಾಕ್ಷ್ಯಚಿತ್ರ ಗಳಲ್ಲ...ಶಾಸನ ಸಭೆಗಳ 136 ವರ್ಷಗಳ ಇತಿಹಾಸ...1881 ರಲ್ಲಿ ಮೈಸೂರು ಪ್ರಜಾ ಪ್ರತಿನಿಧಿ ಸಭೆ ಆರಂಭವಾದಾಗಿನಿಂದ ಇಂದಿನವರೆಗೂ...Photo ಗಳನ್ನು ಹಾಕಿ ಹಿಂದಿನಿಂದ ಕಾಮೆಂಟರಿ ಕೊಟ್ಟು ಕಥೆ ಹೇಳುವುದಲ್ಲ... ಹೆಚ್ಚಿನ ಭಾಗ ಮರುಸೃಷ್ಟಿ...Recreating major portion of the whole thing... ಒಟ್ಟು ಸುಮಾರು 240  ನಿಮಿಷ....ಎರಡು ಚಲನ ಚಿತ್ರಗಳಷ್ಟು..‌ಚಲನ ಚಿತ್ರ ಗಳಂತೆಯೇ ಇದರಲ್ಲಿಯೂ ಸೀಜಿ ಕೆಲಸ ಡಿ.ಐ. ಕೆಲಸ ಇರುತ್ತದೆ... ಹಾಡು ಮತ್ತು ಹಿನ್ನೆಲೆ ಸಂಗೀತ ಇರುತ್ತದೆ...ಹಂಸಲೇಖ ರವರು ಸಂಗೀತ ಮಾಡಿದ್ದಾರೆ‌‌. ಅಂದಂದಿನ ಗತ ಕಾಲವನ್ನು ಪುನಃ ಸೃಷ್ಟಿ ಮಾಡಬೇಕಾಗಿದೆ...Period creation...

ಹಿಂದಿನ ಶಾಸನಸಭೆಗಳ ಶೇಕಡಾ ಎಂಭತ್ತಕ್ಕಿಂತ ಹೆಚ್ಚುಜನ ಬದುಕಿಲ್ಲ... ಅವರನ್ನು ಹೋಲುವ ಕಲಾವಿದರನ್ನು ಹುಡುಕಿ ಮರುಸೃಷ್ಟಿ ಮಾಡಬೇಕಾಗಿದೆ...ಆ ಥರದ ನೂರಾರು ಕಲಾವಿದರು ಬೇಕಾಗುತ್ತಾರೆ...ಅಂದಿನ costumes ಹೊಲೆಸಬೇಕು..ಆಂದಿನ ವಾಹನಗಳನ್ನು ತರಬೇಕು... ಅಂದಿನ ವಿಧಾನ ಮಂಡಲದಅನೇಕ debate ಗಳನ್ನು, ಮತ್ತು ಸನ್ನಿವೇಶ ಗಳನ್ನು ಅಂದಿನ location ಸೃಷ್ಟಿಸಿ ಶೂಟಿಂಗ್ ಮಾಡಬೇಕು.. ನೂರಾರು ಕಲಾವಿದರು... ಒಂದಲ್ಲ ಎರಡಲ್ಲ ಸುಮಾರು 30 ದಿನ ಶೂಟಿಂಗ್ ಮಾಡಬೇಕು.‌

ಸುಮಾರು 250 ಜನರ ಸಂದರ್ಶನ ಮಾಡಬೇಕು, ಒಟ್ಟು 9ರಿಂದ 10 ತಿಂಗಳ ಕಾಲದ ಶೂಟಿಂಗ್,  ಏಳು ಲಕ್ಷ ಪುಟಗಳಷ್ಟು ವರದಿಗಳು, ದಾಖಲೆ ಗಳು ಇವೆ...ಅವುಗಳಲ್ಲಿ ಹುಡುಕಿ ಬೇಕಾದುದನ್ನು ತೆಗೆದುಕೊಳ್ಳಬೇಕು..ಅದರ photo ಗಳನ್ನು ತೆಗೆದುಕೊಳ್ಳಬೇಕು.‌ ಇದಕ್ಕಾಗಿ 6 ಜನರ ತಂಡವೊಂದು 5 ತಿಂಗಳಿಂದ ಕೆಲಸ ನನ್ನ ಬಳಿ ಕೆಲಸ ಮಾಡುತ್ತಿದೆ... ಸುಲಭದ ಕೆಲಸ ಅಲ್ಲವೇ ಅಲ್ಲ. ಇದನ್ನು ನಾನು ಕೇಳಿರಲಿಲ್ಲ...

ಮಿಕ್ಕ ವಿವರಗಳ ಬಗ್ಗೆ ನನ್ನ ಫೇಸ್ಬುಕ್ timeline ಮೂರು ತಿಂಗಳ ಹಿಂದೆಯೇ post ಮಾಡಿದ್ದೇನೆ...July 22 ರಂದು‌‌‌..ಇದರ ಜತೆ ಇದೆ.‌‌‌‌‌‌

ಹೊಸ ಬಗೆಯ ಸಾಕ್ಷ್ಯ ಚಿತ್ರ ಮಾಡುವ ಬಗ್ಗೆ ಸಂತೋಷ ಇದ್ದರೂ ಕೊಂಚ ಆತಂಕ, ಹೆದರಿಕೆಗಳೂ ಇವೆ...

ಕೆಲವು ತಿಂಗಳ ಹಿಂದೆ ವಿಧಾನ ಪರಿಷತ್ ಸಭಾಪತಿ ಗಳಾದ ಶ್ರೀ ಶಂಕರ ಮೂರ್ತಿಯವರೂ, ವಿಧಾನ ಸಭೆಯ ಸ್ಪೀಕರ್ ಶ್ರಿ ಕೋಳೀವಾಡ್ ರವರು, ಮತ್ತು ವಿಧಾನ ಮಂಡಲದ ಅನೇಕ ಹಿರಿಯ ಅಧಿಕಾರಿಗಳಿದ್ದ ಸಭೆಗೆ ನನ್ನನ್ನೂ ಮತ್ತು ಖ್ಯಾತ ನಿರ್ದೇಶಕ ಗಿರಿಶ್ ಕಾಸರವಳ್ಳೀಯವರನ್ನೂ ಕರೆದಿದ್ದರು...
ವಿಧಾನ ಮಂಡಲ ಆರು ದಶಕ ಮುಗಿಸಿದ್ದ ಹಿನ್ನೆಲೆಯಲ್ಲಿ ನಾನು ಮತ್ತು ಗಿರೀಶ್ ಸಾಕ್ಷ್ಯ ಚಿತ್ರಗಳನ್ನು ಮಾಡಬೇಕೆಂದು ಹೇಳಿ ಒಪ್ಪಿಸಿದರು...
"ವಿಧಾನ ಮಂಡಲ ನಡೆದು ಬಂದ ದಾರಿ" ಎಂಬುದು ನಾನು ಮಾಡಬೇಕಾಗಿದ್ದ ಸಾಕ್ಷ್ಯ ಚಿತ್ರ....ಅಲ್ಲ್ಲಿ ಹೆಚ್ಚುಯೊಚನೆ ಮಾಡದೆ ಒಪ್ಪಿಕೊಂಡು ಬಂದ ಮೇಲೆ ಇಪ್ಪತ್ತು ದಿನ ಕೂತು ಅದರ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಾ ಹೋದ ಹಾಗೆ ನನಗೆ ಭಯ ಸುತ್ತಿ ಕೊಳ್ಳತೊಡಗಿತು
ಮೈಸೂರು ರಾಜ್ಯದಲ್ಲಿ ಎಮ್.ಆರ್.ಏ. ( ಮೈಸೂರು ರೆಪ್ರೆಸೆಂಟೆಟಿವ್ ಅಸೆಂಬ್ಲಿ ). ಶುರು ಆಗಿದ್ದು ೧೮೯೧ ರಲ್ಲಿ... ಪ್ರಜೆಗಳು ರಾಜ್ಯದ ಆಡಳಿತದಲ್ಲಿ ಪಾಲ್ಗೊಳ್ಳ ಬೇಕೆಂದು ಆಗಿನ ಮಹಾರಾಜರು ಇದನ್ನು ಶುರು ಮಾಡಿದ್ದು....ಇಡಿಯ ದೇಶದಲ್ಲಿ ಪ್ರಜಾ ಪ್ರಭುತ್ವದ ಕಡೆ ಮೊದಲ ಹೆಜ್ಜೆ ಇದು....ಅಂದರೆ ಅಂದಿನಿಂದ ಇಂದಿನವರೆಗೆ ಸುಮಾರು ನೂರಾ ಇಪ್ಪತ್ತೇಳು ವರ್ಷಗಳ ಅಸೆಂಬ್ಲಿ ಕಥೆಯನ್ನು ಚಿತ್ರೀಕರಿಸ ಬೇಕಾಗಿತ್ತು....!
ಆಗಿನ ದಿವಾನರುಗಳಾದ ಮಿರ್ಜಾ ಇಸ್ಮಾಇಲ್, ಆರ್ಕಾಟ್ ರಾಮಸ್ವಾಮಿ ಮುದಲಿಯಾರ್,ವಿಶ್ವೇಶ್ವರಯ್ಯ ಮುಂತಾದ ಅನೇಕ ದಿವಾನರುಗಳೂ....ಅನೇಕ ಮಹಾರಾಜರುಗಳು...ಎಲ್ಲರ ಆಡಳಿತದ ಕಥೆ.....( ಡೀ.ವಿ.ಜಿ ಯವರು ಕೂಡಾ ಆಗ ಮೆಂಬರ್ ಅಂದರೆ ಮಂತ್ರಿಯ ಥರ ಇದ್ದರು...)....ಆಗ ಸಾವಿರಾರು ಕಾಯಿದೆ ಮತ್ತು ಕಾನೂನುಗಳನ್ನು ಮಂಡಿಸಲಾಗಿತ್ತು...ಚರ್ಚೆಗಳು ಆಗಿದ್ದವು.......!!
ಅನಂತರ ೧೯೫೨...ಚುನಾವಣೆಗಳು...ಈಗಿನ ಸ್ವರೂಪದ ವಿಧಾನ ಸಭೆ ಮತ್ತು ಪರಿಷತ್ ಗಳು...ಅದರ ಅರವತ್ತೈದು ವರ್ಷದ ಕಥೆ..!!!!
ಮೊದಲ ಮುಖ್ಯ ಮಂತ್ರಿ ಕೆ.ಸಿ.ರೆಡ್ಡಿ , ಹನುಮಂತಯ್ಯ ಮುಂತಾದವರಿಂದ ಹಿಡಿದು ಇತ್ತೀಚಿನ ಎಸ್.ಎಮ್.ಕೃಷ್ಣರವರು, ಕುಮಾರ ಸ್ವಾಮಿಯವರು, ಯಡಿಯೂರಪ್ಪನವರು, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ರವರು ಮತ್ತು ಸಿದ್ದರಾಮಯ್ಯನವರ ವರೆಗೆ ಎಲ್ಲರ ಬಗ್ಗೆ ಚಿತ್ರಿಸ ಬೇಕು...( ಕಡಿದಾಳ್ ಮಂಜಪ್ಪ, ಜತ್ತಿ, ಕಂಠಿ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರು, ಬೊಮ್ಮಾಯಿಯವರು, ದೇವೇಗೌಡರು, ಬಂಗಾರಪ್ಪ, ಮೊಯ್ಲಿ, ಪಟೇಲ್,.....ಮುಂತಾದವರು..) ಯಾರ ಬಗ್ಗೆ ಹೇಳುತ್ತೀರಿ, ಯಾರ ಬಗ್ಗೆ ಇಲ್ಲ...!!!??

ಇನ್ನು ವಿರೋಧ ಪಕ್ಷದ ನಾಯಕರು...ಎಂಥೆಂಥಾ ವ್ಯಕ್ತಿಗಳು.....ಪ್ರಜೆಗಳ ಪರವಾಗಿ ಸದನದ ಮೂಲಕ ಸರಕಾರಗಳನ್ನು ನಿಯಂತ್ರಿಸ ಬೇಕಾದವರು ಇವರೇ.....ಅಂದಿನ ಕಾಲದ ಶಾಂತವೇರಿ ಗೋಪಾಲ ಗೌಡ ರಿಂದ ಹಿಡಿದು ಮುಕ್ಕಣ್ಣಪ್ಪ, ರೇವಣ ಸಿದ್ದಯ್ಯ, ಎಸ್. ಶಿವಪ್ಪ, ಎನ್.ಶಿವಪ್ಪ,.....ಅಲ್ಲಿಂದ ಹಿಡಿದು ಇಲ್ಲಿನ ವರೆಗೆ......ನಾಯಕರು, ಉಪ ನಾಯಕರು...ನೂರಾರು ಜನ....!!
ಇನ್ನು ಪ್ರತಿಭಾವಂತ ಸಂಸದೀಯ ಪಟುಗಳು...ವಾಟಾಳ್ ರವರು, ಮಾಧು ಸ್ವಾಮಿ, ರಮೇಶ್ ಕುಮಾರ್, ನಾಣಯ್ಯ, ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ, ಬಾಬಾ ಗೌಡರು, ಈಶ್ವರಪ್ಪ, ನಜ಼ೀರ್ ಸಾಬ್, ಜಾಲಪ್ಪ, ಶ್ರೀರಾಮ ರೆಡ್ಡಿ, ದತ್ತಾ , ರವಿ, ಸುರೇಶ್ ಕುಮಾರ್....ನೂರಾರು ಜನರ ಪಟ್ಟಿ ಮಾಡಬೇಕಾಗುತ್ತದೆ.....
ವಿಚಾರ ಮತ್ತು ಅಪ್ರತಿಮ ಹಾಸ್ಯಭರಿತ ಭಾಷಣಗಳನ್ನು ಮಾಡುತ್ತಿದ್ದ ಪಟೇಲ್, ಸಿದ್ದಲಿಂಗಯ್ಯ, ಹನುಮಂತಯ್ಯ, ಇಬ್ರಾಹಿಮ್, ಕಟ್ಟಿಮನಿ ಯವರು..ಅಸಂಖ್ಯಾತ ಜನ....

ಇನ್ನು ಎರಡೂ ಸದನಗಳ ಸ್ಪೀಕರ್, ಸಭಾಪತಿ ಗಳು...ಅವರು ಎದುರಿಸುತ್ತಿದ್ದ ಕಷ್ಟದ ಸನ್ನಿವೇಷಗಳೂ.......
ಇಲ್ಲಿ ಮಂಡನೆಯಾದ ಸಾವಿರಾರು ಮುಖ್ಯ ಕಾಯಿದೆಗಳು ಕಾನೂನುಗಳು...
ಇಕ್ಕಟ್ಟಿನ, ಬಿಕ್ಕಟ್ಟೀನ ಪ್ರಸಂಗ ಗಳು..ಹಾಸ್ಯ ಸನ್ನಿವೇಶಗಳು...ಅಧಿವೆಶನಗಳು, ಚರ್ಚೆಗಳು....
ಇವೆಲ್ಲ ರಾಜ್ಯದ ಜನರ ಬದುಕನ್ನು ಬದಲಾಯಿಸಿದ ರೀತಿ....
ಇವನ್ನೆಲ್ಲ ವರದಿ ಮಾಡಿ ಸರಕಾರಕ್ಕೆ ಎಚ್ಚರ ತರುತ್ತಿದ್ದ ಪ್ರಮುಖ ಮಾಧ್ಯಮಗಳು.....

ಇಷ್ಟನ್ನೆಲ್ಲಾ ವಿಷದವಾಗಿ ಚಿತ್ರಿಸ ಬೇಕಾದರೆ ಇನ್ನೂರು ಗಂಟೆಗಳ ಅವಧಿಯ ಚಿತ್ರ ಮಾಡ ಬೇಕಾಗುತ್ತದೆ...ಅದು ಸಾಧ್ಯವಿಲ್ಲ.ದ ಮಾತು
ಹಾಗಾಗಿ ಇದನ್ನೆಲ್ಲಾ ಪ್ರಾತಿನಿಧಿಕವಾಗಿ, ಮುಖ್ಯ ವಾದದ್ದನ್ನು ಮಾತ್ರ ಇತ್ತುಕೊಂಡು ಸ್ವಾರಸ್ಯಕರವಾದ ನಿರೂಪಣೆಯ , ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷಗಳ ಅವಧಿಯ ಏಳು ಚಿತ್ರ ಮಾಡಲು ತೀರ್ಮಾನವಾಯಿತು...ಅದೂ ಸಾಲದು! ಆದರೆ ಬೆರೆ ದಾರಿ ಇಲ್ಲ.....

ಈಗಿನ ದೊಡ್ಡ ಸಮಸ್ಯೆ ಇದರಲ್ಲಿ ಶೇಕಡಾ ಎಂಭತ್ತು ಜನ ಬದುಕಿಲ್ಲ...ಗತಿಸಿ ಹೋಗಿದ್ದಾರೆ...!
ಅವರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ...ಅವರಿಲ್ಲದೆ, ಬರಿಯ ಫ಼ೋಟೋ ಇಟ್ಟೂಕೊಂಡು ಧ್ವನಿ ನಿರೂಪಣೆ ಮಾಡಿದರೆ ಖಂಡಿತಾ ಬೋರ್ ಆಗುತ್ತದೆ...
ಮತ್ತೆ ದಾರಿ...!?

ಮುಖ್ಯವಾದ ಜನಗಳನ್ನು , ಸನ್ನಿವೇಶಗಳನ್ನು, ಚರ್ಚೆಗಳನ್ನು, ಅಂದಿನ ಕಾಲ ಘಟ್ಟವನ್ನು ಮರು ಸೃಷ್ಟಿ ಮಾಡಬೇಕಾಗುತ್ತದೆ.....
ಸೀಜಿ ಮೂಲಕ, ಡ್ರಮಟೈಸೇಶನ್ ಮೂಲಕ...ಲ್ಯಾಬ್ ಗಳಲ್ಲಿ, ಮತ್ತು ಸೆಟ್ ಗಳನ್ನು ನಿರ್ಮಿಸಿ ಅದರ ಮೂಲಕ....ಸಾವಿರಾರು ಸಹ ಕಲಾವಿದರು ಬೆಕಾಗುತ್ತಾರೆ....ಅಂದಿನ ಕಾಲದ ಉಡುಪುಗಳು, ವಾಹನಗಳೂ ತರಬೇಕಾಗುತ್ತದೆ....ಮುಲ್ಟಿ ಕ್ಯಾಮೆರ ದಲ್ಲಿ ಶೂಟ್ ಮಾಡ ಬೇಕಾಗುತ್ತದೆ....ದಾಖಲೆಗಳನ್ನು ಹುಡುಕ ಬೇಕಾಗುತ್ತದೆ...
ಇದೆಲ್ಲಾ ದೋಡ್ಡ ಕನಸು.....ತುಂಬ ಹಣ ಬೇಕಾಗುತ್ತದೆ..ಅವರು ಕೊಡುವ ಬಜೆಟ್ ಸಾಲದು...ಬಿಡುವ ಹಾಗಿಲ್ಲ...ಬೇಡ ಅನ್ನುವ ಹಾಗಿಲ್ಲ...ಒಪ್ಪಿಕೊಂಡು ಬಿಟ್ಟಿದ್ದೇನೆ..... ಅದಕ್ಕೇ ಆತಂಕ ಮತ್ತು ಭಯ.....
ಆದರೆ ಇದೊಂದು ಸುಂದರ, ಉಪಯುಕ್ತ ಸಾಕ್ಷ್ಯ ಚಿತ್ರವಾಗುವುದರಲ್ಲಿ ಸಂಶಯವಿಲ್ಲ..... ನಿಮ್ಮ ಹಾರೈಕೆ ಖಂಡಿತಾ ಬೇಕು.

 

 

Follow Us:
Download App:
  • android
  • ios