ಮಾಜಿ ಸಿಎಂ ದಿ. ಜಯಲಲಿತಾ ವೈದ್ಯಕೀಯ ಚಿಕಿತ್ಸೆ ಮತ್ತು ಸಾವಿನ ಬಗೆಗಿನ ಎಲ್ಲಾ ದಾಖಲೆಗಳನ್ನು ತಮಿಳುನಾಡು ಸರ್ಕಾರ ಸಾರ್ಜನಿಕಗೊಳಿಸಿದ್ದು, ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಚೆನ್ನೈ (ಮಾ.06): ಮಾಜಿ ಸಿಎಂ ದಿ. ಜಯಲಲಿತಾ ವೈದ್ಯಕೀಯ ಚಿಕಿತ್ಸೆ ಮತ್ತು ಸಾವಿನ ಬಗೆಗಿನ ಎಲ್ಲಾ ದಾಖಲೆಗಳನ್ನು ತಮಿಳುನಾಡು ಸರ್ಕಾರ ಸಾರ್ಜನಿಕಗೊಳಿಸಿದ್ದು, ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಜಯಲಲಿತಾರ ಹೃದಯ ಕಾರ್ಯ ನಿರ್ವಹಿಸುತ್ತಿರಲಿಲ್ಲ. ನರನಾಡಿಗಳಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ. ಆನಂತರ ನಡೆದ ಪ್ರಕ್ರಿಯೆಗಳನ್ನು ಸಚಿವರಿಗೆ ತಿಳಿಸಲಾಗಿದೆ. ಜಯಲಲಿತಾರಿಗೆ ಹೃದಯಾಘಾತವಾದಾಗಿನಿಂದ ಸಾಯುವವರೆಗಿನ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ ಎಂದು ಬಹಿರಂಗಗೊಳಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.