ನವದೆಹಲಿಯಲ್ಲಿ ಪ್ರತಿಭಟನೆ ನೆಡೆಸುತ್ತಿರುವ ತಮಿಳುನಾಡು ರೈತರು ರಾಷ್ಟ್ರಪತಿ ಭವನದ ಮುಂದೆಯೇ ಬೆತ್ತಲೆಯಾಗಿ ಉರುಳಾಡಿದ್ದಾರೆ. ಪ್ರತಿಭಟನೆ ವೇಳೆ ಪೋಲೀಸರು 7 ರೈತರನ್ನು ಬಂಧಿಸಿದ್ದಾರೆ.
ನವದೆಹಲಿ (ಏ.10): ಕಳೆದ 22ದಿನಗಳಿಂದ ತಮಿಳುನಾಡಿನ ಜಂತರ್ ಮಂತರ್’ನಲ್ಲಿ ಸಾವನ್ನಪ್ಪಿದ್ದ ಕೆಲ ರೈತರ ತಲೆಬುರುಡೆ ಕೈಯಲ್ಲಿ ಹಿಡಿದುಕೊಂಡು ಹಾಗೂ ಸತ್ತ ಹಾವಿನ ತುಂಡುಗಳನ್ನು ತಮ್ಮ ಬಾಯಲ್ಲಿ ಇಟ್ಟುಕೊಂಡು ತಮಿಳುನಾಡು ರೈತರು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರವು ಅವರ ಬೇಡಿಕೆಗಳನ್ನು ಆಲಿಸದ ಹಿನ್ನೆಲೆಯಲ್ಲಿ, ರೈತರು ಇದೀಗ ಬೆತ್ತಲೆಯಾಗಿ ಪ್ರತಿಭಟಿಸುತ್ತಿದ್ದಾರೆ.
ನವದೆಹಲಿಯಲ್ಲಿ ಪ್ರತಿಭಟನೆ ನೆಡೆಸುತ್ತಿರುವ ತಮಿಳುನಾಡು ರೈತರು ರಾಷ್ಟ್ರಪತಿ ಭವನದ ಮುಂದೆಯೇ ಬೆತ್ತಲೆಯಾಗಿ ಉರುಳಾಡಿದ್ದಾರೆ. ಪ್ರತಿಭಟನೆ ವೇಳೆ ಪೋಲೀಸರು 7 ರೈತರನ್ನು ಬಂಧಿಸಿದ್ದಾರೆ.