ಕಳೆದ ಡಿ.10ರಂದು ತಮಿಳುನಾಡು ಸಚಿವ ಸಂಪುಟ, ಜಯಾ ಅವರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಹಾಗೂ ಸಂಸತ್ತು ಕಟ್ಟಡದಲ್ಲಿ ಅಮ್ಮ ಪುತ್ಥಳಿ ಪ್ರತಿಷ್ಠಾಪಿಸುವ ಬಗ್ಗೆ ನಿರ್ಣಯವನ್ನು ಕೈಗೊಂಡಿತ್ತು.
ನವದೆಹಲಿ (ಡಿ.18) ಇತ್ತೀಚೆಗೆ ನಿಧನರಾದ ಜಯಾಲಲಿತಾರಿಗೆ ಭಾರತ ರತ್ನ ನೀಡಿ ಪ್ರಶಸ್ತಿ ಘೋಷಿಸಬೇಕೆಂದು ಕೋರಿ ತಮಿಳುನಾಡು ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ನಾಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಿದ್ದಾರೆ.
ಜತೆಗೆ, ಸಂಸತ್ತು ಕಟ್ಟಡದಲ್ಲಿ ಜಯಾ ಅವರ ಕಂಚಿನ ಪ್ರತಿಮೆಯನ್ನು ಕೂಡ ಪ್ರತಿಷ್ಠಾಪನೆ ಮಾಡಬೇಕೆಂದು ಮನವಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಳೆದ ಡಿ.10ರಂದು ತಮಿಳುನಾಡು ಸಚಿವ ಸಂಪುಟ, ಜಯಾ ಅವರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಹಾಗೂ ಸಂಸತ್ತು ಕಟ್ಟಡದಲ್ಲಿ ಅಮ್ಮ ಪುತ್ಥಳಿ ಪ್ರತಿಷ್ಠಾಪಿಸುವ ಬಗ್ಗೆ ನಿರ್ಣಯವನ್ನು ಕೈಗೊಂಡಿತ್ತು.
ಸೆ.22ರಂದು ಅನಾರೋಗ್ಯ ನಿಮಿತ್ತ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಾ ಡಿ.5ರಂದು ಕೊನೆಯುಸಿರೆಳೆದಿದ್ದರು