ತೃಣಮೂಲ ಕಾಂಗ್ರೆಸ್ ಸಂಸದೆಯೊಬ್ಬರಿಂದ ವಿಮಾನ ಹೊರಡುವುದು 39 ನಿಮಿಷ ತಡವಾಗಿರುವ ಘಟನೆ ನಡೆದಿದೆ.
ನವದೆಹಲಿ (ಏ.07): ತೃಣಮೂಲ ಕಾಂಗ್ರೆಸ್ ಸಂಸದೆಯೊಬ್ಬರಿಂದ ವಿಮಾನ ಹೊರಡುವುದು 39 ನಿಮಿಷ ತಡವಾಗಿರುವ ಘಟನೆ ನಡೆದಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ದೋಲಾ ಸೇನ್ ಇಂದು ಮಧ್ಯಾಹ್ನ 2.25 ಕ್ಕೆ ದೆಹಲಿಯಿಂದ ಕಲ್ಕತ್ತಾಗೆ ಎಐ 020 ರಲ್ಲಿ ಹೊರಡಬೇಕಿತ್ತು. ಇವರ ಜೊತೆ ಇವರ ತಾಯಿಯೂ ಬರುವವರಿದ್ದರು. ಅವರು ವೀಲ್ ಚೇರ್ ನಲ್ಲಿ ಬರುವುದರಿಂದ ಹೆಚ್ಚುವರಿ ಹಣ ಪಾವತಿಸಿ ಎಕಾನಮಿ ಕ್ಲಾಸ್ ನ ಎಡಸಾಲಿನಲ್ಲಿ ತಮ್ಮ ತಾಯಿಗೆ ಸೀಟ್ ಕಾಯ್ದಿರಿಸಿದ್ದರು. ಇದರ ಪಕ್ಕ ಎಮರ್ಜೆನ್ಸಿ ಎಕ್ಸಿಟ್ ಇದೆ.
ವಿಕಲ ಚೇತನರಿಗೆ ಎಮರ್ಜೆನ್ಸಿ ಎಕ್ಸಿಟ್ ಪಕ್ಕ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಹಾಗಾಗಿ ಏರ್ ಇಂಡಿಯಾ ಸಿಬ್ಬಂದಿಯವರು ದೋಲಾ ಸೇನ್ ತಾಯಿಯವರಿಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಲಿಲ್ಲ. ಬ್ಯುಸಿನೆಸ್ ಕ್ಲಾಸ್ ನಲ್ಲಿ ವಿಕಲಚೇತನರಿಗಾಗಿಯೇ ಮೀಸಲಿರುವ ಆಸನದಲ್ಲಿ ಕುಳಿತುಕೊಳ್ಳಲು ಮನವಿ ಮಾಡಿದರು. ಆದರೆ ಇದಕ್ಕೆ ದೋಲಾ ಸೇನ್ ಒಪ್ಪಲಿಲ್ಲ. ನನ್ನ ವಯಸ್ಸಾದ ತಾಯಿಗಾಗಿಯೇ ಹೆಚ್ಚುವರಿ ಹಣ ನೀಡಿ ಈ ಸೀಟನ್ನು ಕಾಯ್ದಿರಿಸಿದ್ದೇನೆ ಎಂದು ತಾಳ್ಮೆ ಕಳೆದುಕೊಂಡು ರೇಗಾಡಿದರು. ಇವರ ವಾದ ಪ್ರತಿವಾದದಲ್ಲಿ 2.25 ಕ್ಕೆ ಹೊರಡಬೇಕಿದ್ದ ವಿಮಾನ 39 ನಿಮಿಷ ತಡವಾಗಿ 3.4 ಕ್ಕೆ ಹೊರಡಬೇಕಾಯಿತು.
