ತಿರುಪತಿಯ ತಿರುಮಲ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ತಯಾರಿಸುವ ಲಡ್ಡುಗೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರವಾನಗಿ ನೀಡಲಾಗಿದೆ.

ಬೆಂಗಳೂರು (ಸೆ.20): ತಿರುಪತಿಯ ತಿರುಮಲ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ತಯಾರಿಸುವ ಲಡ್ಡುಗೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರವಾನಗಿ ನೀಡಲಾಗಿದೆ.

ಲಡ್ಡು ತಯಾರಿಕೆಯಲ್ಲಿ ಶುಚಿತ್ವದ ಕೊರತೆ, ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಮಾತು ದೂರು ಕೇಳಿ ಬಂದ ಹಿನ್ನೆಲೆ, ಟಿಟಿಡಿ ಟ್ರಸ್ಟ್‌ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯನ್ನ ಸಂಪರ್ಕಿಸಿ, ಲಡ್ಡು ತಯಾರಿಕೆ ಬಗ್ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಆಹಾರ ಗುಣಮಟ್ಟ ಪ್ರಾಧಿಕಾರದ ಚೆನ್ನೈನ ಕೇಂದ್ರೀಯ ಪರವಾನಗಿ ಘಟಕವು, ಟಿಟಿಡಿ ಟ್ರಸ್ಟ್‌ಗೆ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಪರವಾನಗಿ ನೀಡಿದೆ. ಇದಕ್ಕಾಗಿ ಟಿಟಿಡಿ 7,500 ರೂ. ಪರವಾನಗಿ ಶುಲ್ಕ ಪಾವತಿಸಿದೆ.