Asianet Suvarna News Asianet Suvarna News

ದೆಹಲಿ ವಿಧಾನಸಭೆಯಲ್ಲಿ ಟಿಪ್ಪು ಭಾವಚಿತ್ರ ಅನಾವರಣ

  • ದೇಶಕ್ಕಾಗಿ ಹೋರಾಡಿದ ಸುಮಾರು 70 ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳ ಅನಾವರಣ
  • ಟಿಪ್ಪು ಸುಲ್ತಾನ್ ಭಾವಚಿತ್ರ ಹಾಕಿರವುದಕ್ಕೆ ಬಿಜೆಪಿ ಆಕ್ಷೇಪ
Tipu Sultan Portrait in Delhi Assembly

ನವದೆಹಲಿ: ಕಳೆದ ನವಂಬರ್’ನಲ್ಲಿ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದ್ದ ‘ಟಿಪ್ಪು’ ವಿಚಾರ ಇದೀಗ ದೆಹಲಿ ವಿಧಾನಸಭೆಯಲ್ಲೂ ವಿವಾದಕ್ಕೆ ಕಾರಣವಾಗಿದೆ.

69ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿ ವಿಧಾನಸಭೆಯಲ್ಲಿ ಟಿಪ್ಪು ಸುಲ್ತಾನ್ ಫೋಟೋವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನಾವರಣ ಮಾಡಿದ್ದಕ್ಕೆ ಬಿಜೆಪಿಯು ಅಪಸ್ವರ ಎತ್ತಿದೆ.

ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್, ಬಿರ್ಸಾ ಮುಂಡಾ, ಸೇರಿದಂತೆ ದೇಶಕ್ಕಾಗಿ ಹೋರಾಡಿದ ಸುಮಾರು 70 ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳನ್ನು ಕೇಜ್ರಿವಾಲ್ ಅನಾವರಣಗೊಳಿಸಿದ್ದಾರೆ.

ಭಗತ್ ಸಿಂಗ್ ದೇಶದ ಹೆಮ್ಮೆ. ಆದರೆ ಟಿಪ್ಪು ಸುಲ್ತಾನ್’ನಂತಹ  ವಿವಾದಾತ್ಮಕ ವ್ಯಕ್ತಿತ್ವವನ್ನು ಗೌರವಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು  ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾ ಹೇಳಿದ್ದಾರೆ.

Follow Us:
Download App:
  • android
  • ios