ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮುಖಂಡರ ವಾಕ್ಸಮರಗಳ ಕಾವು ಹೆಚ್ಚಾತೊಡಗಿದೆ. ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕ ಕೆ,.ಎಸ್.ಈಶ್ವರಪ್ಪ,  ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮುಖಂಡರ ವಾಕ್ಸಮರಗಳ ಕಾವು ಹೆಚ್ಚಾತೊಡಗಿದೆ. ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕ ಕೆ,.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಬಂಟ್ವಾಳದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಭಾಷಣ ಮಾಡಿದ ಈಶ್ವರಪ್ಪ, ‘ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ, ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ, ಸಿದ್ದರಾಮಯ್ಯ ಹೆಸರು ತೆಗೆದು ಟಿಪ್ಪು ಅಂತಾ ಹೆಸರು ಇಟ್ಟುಕೊಳ್ಳಲಿ’ ಎಂದು ಹೇಳಿದ್ದಾರೆ.

ಪೊಲೀಸರನ್ನು ಇಟ್ಟುಕೊಂಡು ಆಟ ಆಡ್ತಿದ್ದೀರಾ ಸಿದ್ದರಾಮಯ್ಯ ಎಂದು ಪ್ರಶ್ನಿಸಿದ ಈಶ್ವರಪ್ಪ, ‘ರಾಷ್ಟ್ರ ಭಕ್ತರನ್ನು ಹಣಿಯಲು ಇಂದಿರಾ ಗಾಂಧಿಯಿಂದಲೇ ಅಗಲಿಲ್ಲ, ಇನ್ನು ನಿಮ್ಮಿಂದ ಏನು ಸಾಧ್ಯ ಸಿದ್ದರಾಮಯ್ಯ’ ಎಂದು ಗುಡುಗಿದ್ದಾರೆ.