ಸುಮ್ ಸುಮ್ನೆ ಖುಷಿಯಾಗಿ ಇರೋದು ಹೇಗ್ ಗೊತ್ತಾ?

ಲೈಫ್‌ನಲ್ಲಿ ಖುಷಿ ಪಡೋದಕ್ಕೆ ಒಂದು ಕಾರಣ ಬೇಕು. ಬೌದ್ಧ ಧರ್ಮದ ಪ್ರಕಾರ, ಮನಸ್ಸಿನ ಹೊರಗೆ ಸಂಭವಿಸುವ ಈ ಕಾರಣಗಳು ನಮ್ಮೊಳಗಿನ ಖುಷಿಯನ್ನು ಕೊಂದುಹಾಕುತ್ತವೆ. ಆದರೆ ನಮ್ಮ ಮನಸ್ಸಿನ ಹೊರಗಿನ ಘಟನೆಗಳಿಂದ ಸಿಗುವ ಖುಷಿ ಕ್ಷಣಿಕ. ದುಃಖದ ಅಲೆ ಕ್ಷಣಮಾತ್ರದಲ್ಲಿ ಖುಷಿಯನ್ನು ಕಬಳಿಸಬಲ್ಲದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ನಮ್ಮೊಳಗೇ ಒಂದು ಖುಷಿ ಇದೆ. ಅದನ್ನು ಅನುಭವಿಸಲು ಹೊರಗಿನ ಕಾರಣಗಳು ಬೇಕಿಲ್ಲ. ಹೊರಗಿನ ಯಾವ ದುಃಖಕ್ಕೂ ಆ ಆನಂದವನ್ನು ತೊಡೆದುಹಾಕಲಾಗದು. ಆದರೆ ಆ ಸಂತೋಷ ನಮಗೆ ಸಿಗಬೇಕಾದರೆ ನಮ್ಮ ಇಗೋ ಮತ್ತು ಆಸೆಗಳಿಗೆ ಬ್ರೇಕ್ ಹಾಕಬೇಕು.