Asianet Suvarna News Asianet Suvarna News

ಅರ್ನಬ್ ಗೋಸ್ವಾಮಿ ಹಾಗೂ ಪ್ರೇಮಾ ಶ್ರೀದೇವಿ ವಿರುದ್ಧ ಟೈಮ್ಸ್ ನೌ ದೂರು

ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹಾಗೂ ಅದೇ ವಾಹಿನಿಯಲ್ಲಿ ಕೆಲಸ ಮಾಡುವ ಪತ್ರಕರ್ತೆ ಪ್ರೇಮಾ ಶ್ರೀದೇವಿ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಮತ್ತು ಆಸ್ತಿ ಕಳ್ಳತನ ಆರೋಪದಡಿ ಟೈಮ್ಸ್ ಗ್ರೂಪ್ ದೂರು ದಾಖಲಿಸಿದೆ.

Times Group files police complaint against Arnab Goswami for alleged copyright infringement

ನವದೆಹಲಿ (ಮೇ.17): ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹಾಗೂ ಅದೇ ವಾಹಿನಿಯಲ್ಲಿ ಕೆಲಸ ಮಾಡುವ ಪತ್ರಕರ್ತೆ ಪ್ರೇಮಾ ಶ್ರೀದೇವಿ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಮತ್ತು ಆಸ್ತಿ ಕಳ್ಳತನ ಆರೋಪದಡಿ ಟೈಮ್ಸ್ ಗ್ರೂಪ್ ದೂರು ದಾಖಲಿಸಿದೆ.

 ರಿಪಬ್ಲಿಕ್ ವಾಹಿನಿಯು ಮೇ.6 ಹಾಗೂ 8 ರಂದು ಟೈಮ್ಸ್ ನೌ ವಾಹಿನಿ ಹಾಗೂ ಇಲ್ಲಿಯ ಪತ್ರಕರ್ತರು ಸಂಗ್ರಹಿಸಿದ ಸುದ್ದಿ, ಆಡಿಯೋ-ವಿಡಿಯೋ ವಿಚಾರಗಳು, ದಾಖಲೆಗಳು, ಟೇಪ್ಸ್’ಗಳನ್ನು ಬಳಸಿಕೊಂಡಿದೆ. ನಂಬಿಕೆ ಉಲ್ಲಂಘನೆ, ಕಂಪನಿಯ ಬೌದ್ಧಿಕ ಸ್ವತ್ತಿನ ಬಳಕೆ, ಕಾಪಿರೈಟ್ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಟೈಮ್ಸ್ ನೌ ಅರ್ನಬ್ ಗೋಸ್ವಾಮಿ ಹಾಗೂ ಪ್ರೇಮಾ ಶ್ರೀದೇವಿ ವಿರುದ್ಧ ದೂರು ನೀಡಿದೆ.

ಸುನಂದಾ ಪುಷ್ಕರ್ ಸಾವಿನ ಪ್ರಕರಣದ ಬಗ್ಗೆ, ಲಾಲು ಪ್ರಸಾದ್ ಭ್ರಷ್ಟಾಚಾರದ ಬಗ್ಗೆ ರಿಪಬ್ಲಿಕ್ ಇತ್ತೀಚಿಗೆ ಆಡಿಯೋ ಬಿಡುಗಡೆ ಮಾಡಿತ್ತು. ಈ ಆಡಿಯೋ ಅರ್ನಬ್ ಹಾಗೂ ಪ್ರೇಮಾ ಟೈಮ್ಸ್ ನೌ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಂಗ್ರಹಿಸಿದ್ದ ಆಡಿಯೋ ಸಂಭಾಷಣೆ. ಅದನ್ನೇ ರಿಪಬ್ಲಿಕ್ ತನ್ನದೇ ಎಕ್ಲೂಸಿವ್ ಎಂದು ಪ್ರಸಾರ ಮಾಡಿಕೊಂಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಟೈಮ್ಸ್ ನೌ ದೂರಿಗೆ ಅರ್ನಬ್ ಗೋಸ್ವಾಮಿ, ಇದು ದೇವರು ಹಾಗೂ ದೆವ್ವದ ನಡುವಿನ ಯುದ್ಧ (ಡೇವಿಡ್ v/s ಗೋಲಿಯಾತ್ ಫೈಟ್) ಗೋಲಿಯಾತ್ ಪೊಲೀಸ್ ಸ್ಟೇಷನ್ ನಲ್ಲಿ ಕುಳಿತಿದ್ದರೆ ಡೇವಿಡ್ ನ್ಯೂಸ್ ರೂಮ್ ನಲ್ಲಿ ಕುಳಿತಿರುತ್ತಾನೆ ಎಂದಿದ್ದಾರೆ.

 

Follow Us:
Download App:
  • android
  • ios