ಮುಂಬೈ: 13 ಜನರ ಸಾವಿಗೆ ಕಾರಣವಾದ ಆರೋಪ ಹೊತ್ತಿದ್ದ ‘ನರಭಕ್ಷಕ’ ಹೆಣ್ಣುಹುಲಿಯನ್ನು ಶಾರ್ಪ್ ಶೂಟರ್‌ವೊಬ್ಬರ ಸಹಾಯದಿಂದ ಮಹಾರಾಷ್ಟ್ರ ಅರ ಣ್ಯ ಇಲಾಖೆ ಕೊಲ್ಲಿಸಿದೆ. ಮಹಾರಾಷ್ಟ್ರ ಜನರಲ್ಲಿ ಭೀತಿ ಹುಟ್ಟಿಸಿದ್ದ ‘ಅವನಿ’ ಅಥವಾ ‘ಟಿ1’ ಹೆಸರಿನ 6 ವರ್ಷದ ಹುಲಿಗಾಗಿ 150 ಮಂದಿ ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ 3 ತಿಂಗಳು ಅರಣ್ಯದಲ್ಲಿ ಜಾಲಾಡಿದ್ದರು. ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದ ಈ ಹುಲಿಯನ್ನು ಶುಕ್ರವಾರ ರಾತ್ರಿ ಯವತ್ಮಾಲ್ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿದೆ.

ಇದಕ್ಕೆ ಪ್ರಾಣಿಪ್ರಿಯರು ಆಕ್ರೋಶಿಸಿದ್ದಾರೆ. ಯಾರಿಗೂ ಸಿಗದೇ ಓಡಾಡುತ್ತಿದ್ದ ಈ ಹುಲಿಯನ್ನು ಬೋನಿನತ್ತ ಸೆಳೆಯಲು ಮತ್ತೊಂದು ಹುಲಿಯ  ಮೂತ್ರ ಹಾಗೂ ಅಮೆರಿಕದ ಸುಗಂಧದ್ರವ್ಯ (ಪರ್ಫ್ಯೂಮ್) ಬಳಸಲಾಗಿತ್ತು.ರಾಳೇಗಣ ಸಿದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊರಾಟಿ ಅರಣ್ಯಪ್ರದೇಶದ 149 ಬೋನಿನ ಬಳಿ ಸಿಂಪಡಿಸಲಾಗಿದ್ದ ಮತ್ತೊಂದು ಹುಲಿಯ ಮೂತ್ರ ಹಾಗೂ ಸುಗಂಧದ್ರವ್ಯ ಆಘ್ರಾಣಿಸುತ್ತಾ ‘ಅವನಿ’ ಬಂದಿದೆ. ಆಗ ಜೀವಂತವಾಗಿ ಹುಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಯತ್ನಿಸಿದ್ದಾರೆ. ದಟ್ಟ ಕಾಡಿನಲ್ಲಿ ಕತ್ತಲು ಆವರಿಸಿದ್ದರಿಂದ, ಸಾಧ್ಯವಾಗಿಲ್ಲ. ಆಗ ಪ್ರಖ್ಯಾತ ಶಾರ್ಪ್‌ಶೂಟರ್ ನವಾಬ್ ಶಫತ್ ಅಲಿ ಪುತ್ರ ಅಸ್ಗರ್ ಅಲಿ ಗುಂಡು ಹಾರಿಸಿದ್ದಾರೆ. ಗಾಯ ಗೊಂಡ ಹುಲಿಯನ್ನು ಆಸ್ಪತ್ರೆಗೆ ಒಯ್ಯಲಾಯಿತಾ ದರೂ, ಅಷ್ಟರಲ್ಲಾಗಲೇ ಹುಲಿ ಪ್ರಾಣ ಬಿಟ್ಟಿತ್ತು.

‘ಅವನಿ’ ಎಂದೇ ಕುಖ್ಯಾತಿ: ಮಹಾರಾಷ್ಟ್ರದ ಯವ ತ್ಮಾಲ್ ಜಿಲ್ಲೆಯಲ್ಲಿ 2012 ರಲ್ಲಿ ‘ಅವನಿ’ ಪತ್ತೆಯಾ ಗಿತ್ತು. ಅರಣ್ಯದಲ್ಲಿ ಮೃತಪಟ್ಟ 13 ಮಂದಿ ಸಾವಿಗೆ ಈ ಹುಲಿಯೇ ಕಾರಣವಾಗಿತ್ತು. ಹೀಗಾಗಿ ಟ್ರ್ಯಾಪ್ ಕ್ಯಾಮೆರಾ ಡ್ರೋನ್, ಶ್ವಾನದಳ, ಹ್ಯಾಂಡ್ ಗ್ಲೈಡರ್ ಸೇರಿ ಅತ್ಯಾಧುನಿಕ  ತಂತ್ರಜ್ಞಾನಗಳೊಂದಿಗೆ 150 ಸಿಬ್ಬಂದಿ, ಆನೆ, ತಜ್ಞರು, ಶಾರ್ಪ್‌ಶೂಟರ್‌ಗಳನ್ನು ‘ಅವನಿ’ ಪತ್ತೆಗೆ ನಿಯೋಜಿಸಿತ್ತು.