Asianet Suvarna News Asianet Suvarna News

ಸಿಎಂ ನಿವಾಸಕ್ಕೆ ಬಿಗಿ ಭದ್ರತೆ; ಕಾನೂನು ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ

ವಿವಿಧ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ  ಬಂದ್ ಹಿನ್ನೆಲೆಯಲ್ಲಿ  ಸಿಎಂ ಅಧಿಕೃತ ನಿವಾಸ ಕಾವೇರಿ‌ಗೆ  ಹೆಚ್ಚು ಪೊಲೀಸರ ಭದ್ರತೆ ಒದಗಿಸಲಾಗಿದೆ.  ಯಾರಿಗೂ ಒಳಗೆ ಬರದಂತೆ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ.

Tight Security Provided to CM House

ಬೆಂಗಳೂರು (ಜ.25): ವಿವಿಧ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ  ಬಂದ್ ಹಿನ್ನೆಲೆಯಲ್ಲಿ  ಸಿಎಂ ಅಧಿಕೃತ ನಿವಾಸ ಕಾವೇರಿ‌ಗೆ  ಹೆಚ್ಚು ಪೊಲೀಸರ ಭದ್ರತೆ ಒದಗಿಸಲಾಗಿದೆ.  ಯಾರಿಗೂ ಒಳಗೆ ಬರದಂತೆ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ.

ಸಿಎಂ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ  ನೀಲಮಣಿ ಎನ್ ರಾಜು ಭೇಟಿ ನೀಡಿದ್ದು  ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ  ಸಿದ್ದರಾಮಯ್ಯ ಗೆ‌ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ‌ಬಂದ್ ಹೇಗಿದೆ, ಭದ್ರತೆ ಎಲ್ಲೆಲ್ಲಿ ಕಲ್ಪಿಸಲಾಗಿದೆ ಎಂದು  ಸಿಎಂ ಪ್ರಶ್ನಿಸಿದ್ದು,  ರಾಜ್ಯದಲ್ಲಿ ಬಂದ್  ಶಾಂತಿಯುತವಾಗಿ ನಡೆಯುತ್ತಿದೆ. ಎಲ್ಲೂ ಕೂಡ ಯಾವುದೇ ಅಹಿತಕರ ಘಟನೆ ನಡೆದಿಲ್ಲ.  ಸೂಕ್ಷ್ಮ ‌ಪ್ರದೇಶದಲ್ಲಿ‌ ಕಟ್ಟೆಚ್ವರ ವಹಿಸಲಾಗಿದೆ. ಮಹದಾಯಿ ಹೋರಾಟ ಕೇಂದ್ರ ಭಾಗ ಹಾಗೂ  ಬೆಂಗಳೂರಲ್ಲೂ ಹೆಚ್ಚು  ಭದ್ರತೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದು ಚುನಾವಣೆಯ ವರ್ಷ. ನಮ್ಮ ಸರ್ಕಾರಕ್ಕೆ ಕೆಲವರು ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ.  ಬಂದ್  ನೆಪದಲ್ಲಿ ಕೋಮು ಗಲಭೆ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ.  ಬಂದ್  ಕರೆ ಕೊಡುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾರೆ.  ಯಾವುದೇ  ಅಹಿತಕರ ಘಟನೆ  ನಡೆಯದಂತೆ ಕಟ್ಟೆಚ್ಚರ ವಹಿಸಿ.  ಸರ್ಕಾರಕ್ಕೆ ಕೆಟ್ಟ ಹೆಸರು‌ ತರುವುದಕ್ಕೆ‌ ಅವಕಾಶ ಮಾಡಕೊಡಬೇಡಿ. ಕಾನೂನು‌ ಕೈಗೆತ್ತಿಕೊಂಡವರ ವಿರುದ್ದ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು  ನೀಲಮಣಿ ಎನ್ ರಾಜುಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

 

Follow Us:
Download App:
  • android
  • ios