ಮನೆ ಎದುರೇ ನಡೆದ ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ. ತನಿಖಾತಂಡವು 8 ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ  ‘ಟೈಗರ್ ವಿಂಗ್’ ಆಯಾಮವೂ ಒಂದು.

ಬೆಂಗಳೂರು: ಮನೆ ಎದುರೇ ನಡೆದ ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ. ತನಿಖಾತಂಡವು 8 ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ ‘ಟೈಗರ್ ವಿಂಗ್’ ಆಯಾಮವೂ ಒಂದು.

ಏನಿದು ಟೈಗರ್ ವಿಂಗ್?

ಹಿಂದೂ ಪರ ಒಲವು ಹೊಂದಿರುವ ಟೈಗರ್ ಸಂಘಟನೆಯು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದೆ. ಪ್ರಮುಖ ಮುಸ್ಲಿಂ ಮುಖಂಡರೇ ಅದರ ಟಾರ್ಗೆಟ್. ಹಿಂದೂ ತತ್ವವನ್ನು ಪ್ರಶ್ನಿಸಿದವರ ಮೇಲೆ ಆ ಸಂಘಟನೆ ದಾಳಿ ನಡೆಸಿದ ನಿದರ್ಶನಗಳಿವೆ. ಹೀಗಾಗಿ ಎಡಪಂಥೀಯ ಧೋರಣೆ ಹೊಂದಿದ್ದ ಗೌರಿ ಅವರನ್ನು ಟೈಗರ್ ಗುರಿಯಾಗಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಗೊತ್ತಾಗಿದೆ.