ಮಾಜಿ – ಹಾಲಿ ಗೃಹ ಸಚಿವರ ನಡುವೆ ಟಿಕೆಟ್ ವಾರ್

Ticket War In Congress
Highlights

ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್’ನಲ್ಲಿ  ಟಿಕೆಟ್’ಗಾಗಿ ಜಗಳ ಶುರುವಾಗಿದೆ ಎನ್ನುವ ಮಾತುಗಳು  ಕೇಳಿ ಬಂದಿದೆ.

ಬೆಂಗಳೂರು : ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್’ನಲ್ಲಿ  ಟಿಕೆಟ್’ಗಾಗಿ ಜಗಳ ಶುರುವಾಗಿದೆ ಎನ್ನುವ ಮಾತುಗಳು  ಕೇಳಿ ಬಂದಿದೆ. ಹಾಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ  ಮಾಜಿ ಗೃಹ ಸಚಿವರಾದ ಪರಮೇಶ್ವರ್ ನಡುವೆ ಟಿಕೆಟ್’ಗಾಗಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಜಯನಗರ ಟಿಕೆಟ್ ವಿಚಾರದಲ್ಲಿ ಇಬ್ಬರ ನಡುವೆ  ವಾರ್ ನಡೆಯುತ್ತಿದೆ ಎನ್ನಲಾಗಿದೆ. ಮಗಳು ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಲು ರಾಮಲಿಂಗಾ ಮನವಿ ಮಾಡಿದ್ದು, ಎಲ್ಲಾ ಟಿಕೆಟ್’ಗಳನ್ನೂ ಅಪ್ಪ ಮಕ್ಕಳಿಗೆ ನೀಡಿದರೇ ಹೇಗೆ ಎಂದು ಪರಮೇಶ್ವರ್ ಹೇಳಿದ್ದು, ಎಂ.ಸಿ ವೇಣುಗೋಪಾಲ್ ಪರ ಬ್ಯಾಟಿಂಗ್ ಮಾಡಿದ್ದಾರೆ .

ಅರ್ಹತೆ ಇದ್ದವರಿಗೆ ಟಿಕೆಟ್ ಕೊಡಿ ನನ್ನ ಮಗಳು ಎಂದು ಕೊಡಬೇಡಿ ಎಂದು ರಾಮಲಿಂಗಾರೆಡ್ಡಿ ಸಿಎಂ ಅವರಿಗೆ ತಿಳಿಸಿದ್ದು, ಜಯನಗರ  ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಹೆಸರು ಕಳಿಸಲು ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೊನೆಗೆ ಸಿಎಂ ಮಧ್ಯ ಪ್ರವೇಶದಿಂದ  ವಿಚಾರ ತಣ್ಣಗಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡುವ ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ.

loader