ಅಪರಿಚಿತ ಸ್ಥಳಕ್ಕೆ ಕರೆದೋಯ್ದು ಮೂರು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ಮನಸೋಇಚ್ಛೆ ಲೈಂಗಿಕವಾಗಿ ಹಿಂಸಿಸಿ ಸಾಕಷ್ಟು ಅತ್ಯಾಚಾರವೆಸಗಿದ್ದಾರೆ.

ಬೆನೋನಿ(ಮೇ.30): ಪುರುಷರು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರವೆಸಗುವ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮಹಿಳೆಯರೆ ಪುರುಷರನ್ನು ಅಪಹರಿಸಿ 3 ದಿನ ಬಂಧನದಲ್ಲಿಟ್ಟುಕೊಂಡು ಅತ್ಯಾಚಾರವೆಸಗಿದ ಘಟನೆ ದಕ್ಷಿಣ ಆಫ್ರಿಕಾದ ಬೆನೋಮಿ ಪಟ್ಟಣದಲ್ಲಿ ನಡೆದಿದೆ.

ಮೇ 19ರಂದು 23 ವರ್ಷದ ಯುವಕನನ್ನು ಕಾರಿನಿಂದ ಮೂವರು ಮಹಿಳೆಯರು ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೋಯ್ದು ಮೂರು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ಮನಸೋಇಚ್ಛೆ ಲೈಂಗಿಕವಾಗಿ ಹಿಂಸಿಸಿ ಸಾಕಷ್ಟು ಅತ್ಯಾಚಾರವೆಸಗಿದ್ದಾರೆ. ಕೊಠಡಿಯಲ್ಲಿ ಯುವಕನನ್ನು ವಿಪರೀತವಾಗಿ ತೊಂದರೆ ನೀಡಿರುವ ಮಹಿಳೆಯರು ಬಲವಂತವಾಗಿ ಮದ್ಯಪಾನ ಕೂಡ ಮಾಡಿಸಿದ್ದಾರೆ.

ಮೂರು ದಿನಗಳ ನಂತರ ಮೇ.22 ರಂದು ಬಿಡುಗಡೆಗೊಂಡ ಆ ಯುವಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.ತೀರ್ವ ಆಘಾತಕ್ಕೊಳಗಾದ ಈ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಹಿಳೆಯರ ಬಂಧನಕ್ಕೆ ಬಲೆ ಬೀಸಿದ್ದಾರೆ.