ಒಂದು ಪ್ರಿಂಟರ್, ಸ್ಕ್ಯಾನರ್​, ವೆಲ್ಡಿಂಗ್​ ಗನ್​ ಜೊತೆಗೆ ಪೇಪರ್​. ಅದನ್ನು ನೀಟಾಗಿ ಕತ್ತರಿಸಲು ಒಂದು ಕತ್ತರಿ. ಇಷ್ಟಿದ್ರೆ ಆಯ್ತು 2000 ರೂಪಾಯಿ ನಕಲಿ ನೋಟು ರೆಡಿ. ಹೌದು, ಇಂಥದ್ದೊಂದು ಖತರ್ನಾಕ್ ಟೀಮ್ ಈಗ ಮೈಸೂರು ಪೊಲೀಸರ ಅತಿಥಿಯಾಗಿದೆ. ರೋಷನ್​, ರೇವಣ್ಣ ಹಾಗೂ ಅಜಿತ್ ಎಂಬವರು ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯ ಬಾಡಿಗೆ ಮನೆಯಲ್ಲಿ ಖದೀಮರು ಈ ದೇಶದ್ರೋಹಿ ಕೆಲಸ ಮಾಡುತ್ತಿದ್ದರು. 2000 ಮುಖಬೆಲೆಯ ಅಸಲಿ ನೋಟನ್ನು ಸ್ಕ್ಯಾನ್​ ಮಾಡಿ ನಂತರ ಅದನ್ನು ಕಲರ್​ ಪ್ರಿಂಟ್​ ತೆಗೆದು ಕೊನೆಗೆ ಸಿಲ್ವರ್​ ವೆಲ್ಡಿಂಗ್​ ಮಾಡಿ ನಕಲಿ ನೋಟು ತಯಾರಿಸುತ್ತಿದ್ದರು. ಗೃಹಚಾರ ಕೆಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮೈಸೂರು(ನ.19): ದೇಶದಲ್ಲಿ ಕಪ್ಪು ಹಣ ತೊಲಗಿಸಬೇಕು ಅಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2000 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿದ್ದಾರೆ. ಆದರೆ ಖೋಟಾ ನೋಡು ಮಾಡುವವರಿಗೆ ಇದೇ ವರದಾನವಾದಂತೆ ಕಾಣುತ್ತಿದೆ. ಹೊಸ ನೋಟು ಚಲಾವಣೆಗೆ ಬಂದು ವಾರ ಕಳೆಯುವಷ್ಟರಲ್ಲಿ ಅದನ್ನು ಖೋಟಾ ಮಾಡುವ ಕೆಲಸವನ್ನು ಶುರುಮಾಡಿಬಿಟ್ಟಿದ್ದಾರೆ. ನೋಡಲು ಬಹಳ ತೆಳುವಾಗಿ ಕಾಣುವ ನೋಟನ್ನಯ ಖದೀಮರು ಬಹಳ ಸುಲಭವಾಗಿಯೇ ನಖಲಿ ಮಾಡುತ್ತಿದ್ದಾರೆ. ಅದು ಹೇಗೆ ಅಂತಿರಾ? ಇಲ್ಲಿದೆ ವಿವರ.

ಒಂದು ಪ್ರಿಂಟರ್, ಸ್ಕ್ಯಾನರ್​, ವೆಲ್ಡಿಂಗ್​ ಗನ್​ ಜೊತೆಗೆ ಪೇಪರ್​. ಅದನ್ನು ನೀಟಾಗಿ ಕತ್ತರಿಸಲು ಒಂದು ಕತ್ತರಿ. ಇಷ್ಟಿದ್ರೆ ಆಯ್ತು 2000 ರೂಪಾಯಿ ನಕಲಿ ನೋಟು ರೆಡಿ. ಹೌದು, ಇಂಥದ್ದೊಂದು ಖತರ್ನಾಕ್ ಟೀಮ್ ಈಗ ಮೈಸೂರು ಪೊಲೀಸರ ಅತಿಥಿಯಾಗಿದೆ.

ರೋಷನ್​, ರೇವಣ್ಣ ಹಾಗೂ ಅಜಿತ್ ಎಂಬವರು ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯ ಬಾಡಿಗೆ ಮನೆಯಲ್ಲಿ ಖದೀಮರು ಈ ದೇಶದ್ರೋಹಿ ಕೆಲಸ ಮಾಡುತ್ತಿದ್ದರು. 2000 ಮುಖಬೆಲೆಯ ಅಸಲಿ ನೋಟನ್ನು ಸ್ಕ್ಯಾನ್​ ಮಾಡಿ ನಂತರ ಅದನ್ನು ಕಲರ್​ ಪ್ರಿಂಟ್​ ತೆಗೆದು ಕೊನೆಗೆ ಸಿಲ್ವರ್​ ವೆಲ್ಡಿಂಗ್​ ಮಾಡಿ ನಕಲಿ ನೋಟು ತಯಾರಿಸುತ್ತಿದ್ದರು. ಗೃಹಚಾರ ಕೆಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರೋಪಿ ರೇವಣ್ಣ ನಕಲಿ 2ಸಾವಿರ ರೂಪಾಯಿ ನೋಟನ್ನು ಟೀ ಅಂಗಡಿಯವನಿಗೆ ಕೊಟ್ಟಿದ್ದಾನೆ. ಆಗ ಇವರ ಅಸಲಿಯತ್ತು ಬಯಲಾಗಿದೆ. ಪೊಲೀಸರು ರೇವಣ್ಣನನ್ನು ಬೆಂಡೆತ್ತಿದಾಗ ಕುಂಬಾರಕೊಪ್ಪಲು ಬಡಾವಣೆಯಲ್ಲಿ ಇಂಥದ್ದೊಂದು ಅಡ್ಡೆ ಇರುವುದು ಬಯಲಾಗಿದೆ.

ಮೂವರನ್ನು ಬಂಧಿಸಿದ ಪೊಲೀಸರು 44 ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸಿದ್ದ ಪ್ರಿಂಟರ್​, ಸ್ಕ್ಯಾನರ್​, ವೆಲ್ಡಿಂಗ್​ ಮಿಷನ್​ ಹಾಗೂ ಕತ್ತರಿ ಸೀಜ್ ಮಾಡಿದ್ದಾರೆ. ಒಟ್ಟಿನಲ್ಲಿ ಹೊಸ ನೋಟು ಚಲಾವಣೆಗೆ ಬಂದ ಹತ್ತೇ ದಿನದಲ್ಲಿ ನಕಲಿ ನೋಟಿನ ಜಾಲ ಹುಟ್ಟಿಕೊಂಡಿದ್ದು ದುರಂತ.