ಇಂದು ಎರಡನೇ ಶನಿವಾರ(ಡಿ.10), ಭಾನುವಾರ(ಡಿ.11) ಮತ್ತು ಈದ್ ಮಿಲಾದ್(ಡಿ.12)ಗಳು ಸರತಿಯಲ್ಲಿ ಬಂದಿರುವ ಕಾರಣ ಸತತ 3 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಬೆಂಗಳೂರು(ಡಿ.10) ಇಂದಿನಿಂದ ಸತತ 3 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುವ ಕಾರಣ ನಗದು ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶಾದ್ಯಂತ ಬಹುತೇಕ ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕೆಲವದರಲ್ಲಿ ಹಣವಿಲ್ಲ, ಇನ್ನು ಕೆಲವು ಮುಚ್ಚಿವೆ. ಹೀಗಿರುವಾಗ, ಹೆಚ್ಚಿನವರು ನಗದಿಗಾಗಿ ಬ್ಯಾಂಕುಗಳನ್ನೇ ಅವಲಂಬಿಸಿದ್ದಾರೆ.

ಇಂದು ಎರಡನೇ ಶನಿವಾರ(ಡಿ.10), ಭಾನುವಾರ(ಡಿ.11) ಮತ್ತು ಈದ್ ಮಿಲಾದ್(ಡಿ.12)ಗಳು ಸರತಿಯಲ್ಲಿ ಬಂದಿರುವ ಕಾರಣ ಸತತ 3 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಈಗಾಗಲೇ ಕ್ಯೂಗಳಲ್ಲಿ ನಿಂತು ಸಹನೆ ಕಳೆದುಕೊಂಡಿರುವ ಜನರಿಗೆ ಈ ಮೂರು ದಿನಗಳು ಇನ್ನಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ.