ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ. ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಗ್ರೇನೇಡ್ ದಾಳಿ ನಡೆಸಿದ್ದಾರೆ. ದಾಳಿಯಿಂದ ಮೂವರು ಭದ್ರತಾಪಡೆ ಯೋಧರು ಹಾಗೂ ಓರ್ವ ಮಹಿಳೆಗೆ ಗಾಯ

ಶ್ರೀನಗರ(ಜೂನ್.2): ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಿಆರ್‌ಪಿಆಫ್ ಸೈನಿಕರ ಮೇಲೆ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ಶ್ರೀನಗರದ ಫತೇಹಕಡಲ್ ಹಾಗೂ ಬುದ್ಧಶಹ ಚೌಕ್‌ನಲ್ಲಿ ಉಗ್ರರು ನಡೆಸಿದ ಗ್ರೇನೇಡ್ ದಾಳಿಯಿಂದ ಮೂವರು ಸಿಆರ್‌ಪಿಎಫ್ ಸೈನಿಕರು ಹಾಗೂ ಒರ್ವ ಮಹಿಳೆ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಫತೇಹಕಡಲ್ ಹಾಗು ಬುದ್ಧಶಹ ಚೌಕ್‌ನಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಭದ್ರತಾ ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. 

ಉಗ್ರರ ದಾಳಿ ವೇಳೆ ತಕ್ಷಣವೇ ಪ್ರತ್ಯುತ್ತರ ನೀಡಿದ ಸಿಆರ್‌ಪಿ ಯೋಧರು ಹೆಚ್ಚಿನ ಅನಾಹುತವನ್ನ ತಪ್ಪಿಸಿದ್ದಾರೆ. ಗಾಯಗೊಂಡರು ಚೇತರಿಸಿಕೊಳ್ಳುತ್ತಿದ್ದು ಶ್ರೀನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಷ್ಟೇ ಅಲ್ಲ ಇದೀಗ ಪ್ರತಿ ವಾಹನಗಳನ್ನ ತಪಾಸಣೆ ನಡೆಸುತ್ತಿದ್ದಾರೆ. ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಕೂಂಬಿಂಗ್ ಕಾರ್ಯಚರಣೆ ಆರಂಭಗೊಂಡಿದೆ.