ಹೊರಟ್ಟಿ ಅವರೇ ನಿಮ್ಮನ್ನು ಕೊಲ್ಲಲು ಮುಂಬೈನಿಂದ ಐವರ ತಂಡ ಹುಬ್ಬಳ್ಳಿಗೆ ಬಂದಿಳಿ ದಿದ್ದು, ಗುಂಡಿಕ್ಕಿ ಹತ್ಯೆ ಮಾಡಲಾ ಗುವುದು. ಎಚ್ಚರದಿಂದ ಇರಿ’ ಎಂದು ಬೆದರಿಕೆ ಹಾಕಲಾಗಿದೆ.

ಹುಬ್ಬಳ್ಳಿ(ನ.08): ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಕ್ರಿಯರಾಗಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊರಟ್ಟಿ ಅವರ ಕಚೇರಿಗೆ ಸೋಮವಾರ ಈ ಜೀವ ಬೆದರಿಕೆ ಪತ್ರ ಬಂದಿದ್ದು, ಕಚೇರಿ ಸಿಬ್ಬಂದಿ ಜೀವ ಬೆದರಿಕೆ ಪತ್ರವನ್ನು ಡಿಸಿಪಿ ಮಲ್ಲಿಕಾರ್ಜುನ ನ್ಯಾಮ ಗೌಡರ್ ಅವರಿಗೆ ಹಸ್ತಾಂತರಿಸಿದ್ದಾರೆ. ಪತ್ರದಲ್ಲಿ ‘ಹೊರಟ್ಟಿ ಅವರೇ ನಿಮ್ಮನ್ನು ಕೊಲ್ಲಲು ಮುಂಬೈನಿಂದ ಐವರ ತಂಡ ಹುಬ್ಬಳ್ಳಿಗೆ ಬಂದಿಳಿ ದಿದ್ದು, ಗುಂಡಿಕ್ಕಿ ಹತ್ಯೆ ಮಾಡಲಾ ಗುವುದು. ಎಚ್ಚರದಿಂದ ಇರಿ’ ಎಂದು ಬೆದರಿಕೆ ಹಾಕಲಾಗಿದೆ.

ಹೊರಟ್ಟಿಯವರ ಕಚೇರಿ ಸಿಬ್ಬಂದಿ ಪ್ರಕಾರ ಸೋಮವಾರ ಮಧ್ಯಾಹ್ನ 12.30ಕ್ಕೆ ಅಂಚೆ ಮೂಲಕ ಈ ಪತ್ರ ಬಂದಿದೆ. ಹುಬ್ಬಳ್ಳಿಯ ಉಣಕಲ್ಲ ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದು, ಕನ್ನಡ ಭಾಷೆಯಲ್ಲೇ ಬರೆಯಲಾಗಿದೆ. ಈ ಬಗ್ಗೆ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಲಭ್ಯವಾಗಿಲ್ಲ. ಆದರೆ, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಬೆದರಿಕೆ ಪತ್ರ ಬಂದಿರುವುದನ್ನು ಖಚಿತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಪತ್ರ ಬರೆಯಲಾಗಿದೆ ಎನ್ನುವುದು ಖಚಿತವಾಗಿಲ್ಲ.