ಮೂವರು ಕಳ್ಳರು ರಮಣ ಹೋಟೆಲ್ ಬಳಿ ಇದ್ದ ಹಳೇ ಕಟ್ಟಡವೊಂದಕ್ಕೆ ಕಬ್ಬಿಣದ ವಸ್ತುಗಳನ್ನು ಕದಿಯಲು ನುಗ್ಗಿದ್ದರು. ಈ ವೇಳೆ ವಿಷಯ ತಿಳಿದ ಸಾರ್ವಜನಿಕರು, ಕಳ್ಳರನ್ನು ಹಿಡಿದು ಕೂಡಿ ಹಾಕಿದ್ದಾರೆ.
ಕುಡಿಯೋದಿಕ್ಕೆ ದುಡ್ಡಿಲ್ಲ ಅಂತ ಕಳ್ಳತನ ಮಾಡೋಕೆ ಬಂದಿದ್ದ ಖದೀಮರು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ. ಮೂವರು ಕಳ್ಳರು ರಮಣ ಹೋಟೆಲ್ ಬಳಿ ಇದ್ದ ಹಳೇ ಕಟ್ಟಡವೊಂದಕ್ಕೆ ಕಬ್ಬಿಣದ ವಸ್ತುಗಳನ್ನು ಕದಿಯಲು ನುಗ್ಗಿದ್ದರು. ಈ ವೇಳೆ ವಿಷಯ ತಿಳಿದ ಸಾರ್ವಜನಿಕರು, ಕಳ್ಳರನ್ನು ಹಿಡಿದು ಕೂಡಿ ಹಾಕಿದ್ದಾರೆ. ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಸತ್ಯ ಬಾಯ್ಬಿಟ್ಟ ಖದೀಮರು, ಕುಡಿಯಲು ಹಣವಿಲ್ಲ ಕಾರಣ ಕಳ್ಳತನಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಮಣಿಪುರ ಹಾಗೂ ತಮಿಳುನಾಡು ಮೂಲದವರು ಎನ್ನಲಾಗಿದೆ.
