Asianet Suvarna News Asianet Suvarna News

ಡೊನಾಲ್ಡ್ ಟ್ರಂಪ್'ನ ಪತ್ನಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುತ್ತಾಳಂತೆ ಈಕೆ! ಕಾರಣವೇನು ಗೊತ್ತಾ?

ಇತರರಿಗಿಂತ ವಿಭಿನ್ನವಾಗಿರುವ ಬಯಕೆ ಹೊಂದಿರುವವರೂ ನಮ್ಮ ಮಧ್ಯೆ ಇದ್ದಾರೆ. ಇದೀಗ ಅಮೆರಿಕಾದ ಕ್ಲಾಡಿಯಾ ಸಾಯಿರಾ ಎಂಬಾಕೆಗೆ ತಾನು ಅಮೆರಿಕಾ ಅಧ್ಯಕ್ಷನ ಪತ್ನಿ ಮಲೇನಿಯಾಳಂತೆ ಕಾಣಬೇಕೆಂಬ ಇಚ್ಛೆ ಇದೆಯಂತೆ. ಹೀಗಾಗಿ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾಳೆ.

this woman wants to resemble like melania trump
  • Facebook
  • Twitter
  • Whatsapp

ವಾಷಿಂಗ್ಟನ್(ಜೂ.23): ಇತರರಿಗಿಂತ ವಿಭಿನ್ನವಾಗಿರುವ ಬಯಕೆ ಹೊಂದಿರುವವರೂ ನಮ್ಮ ಮಧ್ಯೆ ಇದ್ದಾರೆ. ಇದೀಗ ಅಮೆರಿಕಾದ ಕ್ಲಾಡಿಯಾ ಸಾಯಿರಾ ಎಂಬಾಕೆಗೆ ತಾನು ಅಮೆರಿಕಾ ಅಧ್ಯಕ್ಷನ ಪತ್ನಿ ಮಲೇನಿಯಾಳಂತೆ ಕಾಣಬೇಕೆಂಬ ಇಚ್ಛೆ ಇದೆಯಂತೆ. ಹೀಗಾಗಿ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾಳೆ.

ಇನ್ನು ಶಾಕಿಂಗ್ ವಿಚಾರವೆಂದರೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋದ ಸೆಂಟರ್'ನವರು ಈಕೆಯ ಈ ಇಚ್ಛೆಯನ್ನು ಪೂರ್ಣಗೊಳಿಸಲು ತಯಾರಾಗಿದ್ದು ಇದಕ್ಕೆ ಬೇಕಾದ ಪೇಪರ್'ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತಹನಾಡಿರುವ ಸಾಯಿರಾ 'ನನಗೆ ದೇಶದ ಪ್ರಥಮ ಮಹಿಳೆಯಂತೆ ಅನುಭವವಾಗಬೇಕು. ಆಂತರಿಕವಾಗಿ ನಾನು ಅಂತಹ ಅನುಭವ ಪಡೆದಿದ್ದು, ಬಾಹ್ಯವಾಗಿ ನನಗೆ ಆ ಅನುಭವ ಬೇಕು. ಈ ಮೂಲಕ ನಾನು ಆಕೆಯ ಎರಡನೇ ಆಗುತ್ತೇನೆ. ಅಲ್ಲದೇ ನಾನು ಮಲೇನಿಯಾರ ಅತಿ ದೊಡ್ಡ ಅಭಿಮಾನಿ ' ಎಂದಿದ್ದಾರೆ.

ಈಕೆಯ ಪ್ಲಾಸ್ಟಿಕ್ ಸರ್ಜರಿಗಾಗಿ ಮಂಗಳವಾರದಿಂದಲೇ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ಹೊಟ್ಟೆ, ತುಟಿಯ ಆಕಾರವನ್ನು ಪರಿವರ್ತಿಸಲಾಗಿದೆ ಹಾಗೂ ಇಂಜೆಕ್ಷನ್'ಗಳನ್ನೂ ನೀಡಲಾಗಿದೆ.

ಸದ್ಯ ವೈದ್ಯರು ಈಕೆಯ ಇಚ್ಛೆಯನ್ನು ಈಡೇರಿಸುವಲ್ಲಿ ಅದೆಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಹಾಗೂ ಅಮೆರಿಕಾದ ಪ್ರಥಮ ಮಹಿಳೆ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಷ್ಟೇ.

Follow Us:
Download App:
  • android
  • ios