ಈ ವಾರದ ನಿಮ್ಮ ರಾಶಿಯ ಫಲಾಫಲಗಳು ಹೇಗಿವೆ ನೋಡಿ

First Published 8, Apr 2018, 10:59 AM IST
This Week Horoscope
Highlights

ಮೇಷ:  ಹಣಕಾಸಿನ ವ್ಯವಹಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ  ವಹಿಸಿ. ಪ್ರೀತಿ ಪಾತ್ರರಿಂದ ಸಿಹಿ ಸುದ್ದಿ ಕೇಳುವಿರಿ.  ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಿನಿಮಾರಂಗದವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮಿತ  ವ್ಯಯಕ್ಕೆ ಒತ್ತು ನೀಡಿ. ಶಿವನನ್ನು ಪ್ರಾರ್ಥಿಸಿ. ಹೆತ್ತವರ ಸಹಾಯದಿಂದ ಮಾನಸಿಕ ನೆಮ್ಮದಿ. ಪ್ರಯಾಣ ಸಾಧ್ಯತೆ.

ಮೇಷ: 

ಹಣಕಾಸಿನ ವ್ಯವಹಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ  ವಹಿಸಿ. ಪ್ರೀತಿ ಪಾತ್ರರಿಂದ ಸಿಹಿ ಸುದ್ದಿ ಕೇಳುವಿರಿ.  ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಿನಿಮಾರಂಗದವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮಿತ  ವ್ಯಯಕ್ಕೆ ಒತ್ತು ನೀಡಿ. ಶಿವನನ್ನು ಪ್ರಾರ್ಥಿಸಿ. ಹೆತ್ತವರ ಸಹಾಯದಿಂದ ಮಾನಸಿಕ ನೆಮ್ಮದಿ. ಪ್ರಯಾಣ ಸಾಧ್ಯತೆ.

ವೃಷಭ
ಹಣಕಾಸಿನ ವ್ಯವಹಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಪ್ರೀತಿ ಪಾತ್ರರಿಂದ ಸಿಹಿ ಸುದ್ದಿ ಕೇಳುವಿರಿ. ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಿರಿ.  ಸಿನಿಮಾರಂಗದವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮಿತವ್ಯಯಕ್ಕೆ ಒತ್ತು ನೀಡಿ. ಶಿವನನ್ನು ಪ್ರಾರ್ಥಿಸಿ. ಹೆತ್ತವರ ಸಹಾಯದಿಂದ ಮಾನಸಿಕ ನೆಮ್ಮದಿ. ಪ್ರಯಾಣ ಸಾಧ್ಯತೆ.

ಮಿಥುನ
ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು ಬೇಡ. ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಹೊಸ ವಿಚಾರಗಳತ್ತ ಮನಸ್ಸು ಹರಿಯಲಿದೆ. ಉದ್ಯೋಗದಲ್ಲಿ  ಪ್ರಗತಿ. ಸಂಗಾತಿಯೊಂದಿಗೆ ಪ್ರೀತಿಯಿಂದ ವರ್ತಿಸಿ. ದೀರ್ಘ  ಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆರೋಗ್ಯದ  ಕಡೆ ನಿಗಾ ಇರಲಿ. ಒಳ್ಳೆಯ ವಾರ್ತೆ ತಿಳಿಯಲಿದೆ.

ಕಟಕ
ಬಂಧುಗಳಿಂದ ಸಹಾಯ. ಉದ್ಯೋಗದಲ್ಲಿ ಪ್ರಗತಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕೆಟ್ಟ  ಆಲೋಚನೆಗಳಿಂದ ಹೊರಬರುವಿರಿ. ಆರ್ಥಿಕವಾಗಿ ಲಾಭವಾಗಲಿದೆ. ಲೆಕ್ಕಾಚಾರದ ಕಡೆಗೆ ಹೆಚ್ಚು ಗಮನ ನೀಡಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
 

ಸಿಂಹ

ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಬಹು ದಿನಗಳ ಕನಸು ನನಸಾಗಲಿದೆ. ಸಂಬಂಧಗಳ ಬಗ್ಗೆ ಎಚ್ಚರಿಕೆ  ಇರಲಿ. ರಾಜಕಾರಣಿಗಳ ಜೀವನದಲ್ಲಿ ದೊಡ್ಡ ತಿರುವು ಏರ್ಪಡಲಿದೆ. ಹಿಂದಿನ ನಿರಂತರವಾದ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ಸೇವಾ ಮನೋಭಾವ ಹೆಚ್ಚಾಗಲಿದೆ. 

ಕನ್ಯಾ
ಕೆಲಸದಲ್ಲಿ ಆಸಕ್ತಿ ಇರಲಿ. ಹತ್ತಿರದ ಬಂಧುಗಳೊಂದಿಗೆ  ವ್ಯವಹಾರ ಬೇಡ. ಉದ್ಯೋಗದಲ್ಲಿ ಒಳ್ಳೆಯ  ಬೆಳವಣಿಗೆಯಾಗಲಿದೆ. ಹೊಸ ಮನೆ ಕೊಳ್ಳುವವರಿಗೆ  ಸಕಾಲ. ಉಳಿತಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ. ಗಂಡ ಹೆಂಡತಿಯರ ಕಲಹ ದೂರವಾಗಲಿದೆ. ವೃತ್ತಿ ರಂಗದಲ್ಲಿ ನಿರೀಕ್ಷಿತ  ಯಶಸ್ಸು ದೊರೆಯಲಿದೆ.

ತುಲಾ
ರೈತಾಪಿ ವರ್ಗಕ್ಕೆ ಶುಭವಾಗಲಿದೆ. ನಿಮ್ಮ ಕಾರ್ಯವನ್ನು ಹೆಚ್ಚಿನ ಸಂಖ್ಯೆಯ ಜನರು  ಮೆಚ್ಚಿಕೊಳ್ಳಲಿದ್ದಾರೆ. ಉಳಿತಾಯದ ಹಣ  ಬಳಕೆಯಾಗಲಿದೆ. ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.  ಅತಿಯಾದ ಆಸೆ ಒಳ್ಳೆಯದಲ್ಲ. ಮದುವೆಯ ವಿಚಾರದಲ್ಲಿ ನಿಧಾನಿಸುವುದು ಒಳ್ಳೆಯದು. ಆದಾಯದಲ್ಲಿ ಏರಿಕೆ.

ವೃಶ್ಚಿಕ
ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲ  ಉಂಟಾಗಲಿದೆ. ಆದರೆ ಇದು ಕ್ಷಣಿಕ ಮಾತ್ರ. ಹಿಂದಿನ ಕೆಲಸ ಕಾರ್ಯಗಳು ಕೈಗೂಡಲಿವೆ. ವಿನಾಕಾರಣ ಕೋಪ ಬೇಡ. ಅಪರಿಚಿತರ ಭೇಟಿಯಿಂದ ಒಳ್ಳೆಯ ಲಾಭ
ದೊರೆಯಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಗ್ರಹ ದೋಷಗಳ ನಿವಾರಣೆಯಾಗಲಿದೆ. ಆರೋಗ್ಯದಲ್ಲಿ ತುಸು ಏರುಪೇರು.

ಧನುಸ್ಸು
ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಉಳಿತಾಯದ  ಕಡೆಗೆ ಆಸಕ್ತಿ ವಹಿಸುವಿರಿ. ಮಕ್ಕಳ ಆರೋಗ್ಯದ ಕಡೆ   ಗಮನವಿರಲಿ. ಹೊಸ ವಾಹನ ಕೊಳ್ಳುವ ಯೋಗ.  ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಅಧಿಕಾರದ
ಸ್ಥಾನದಲ್ಲಿರುವವರು ಸಮಾಜಮುಖಿ ಕಾರ್ಯಗಳನ್ನು  ಮಾಡುವಿರಿ. ಶುಭವಾರ್ತೆ ತಿಳಿಯಲಿದೆ.

ಮಕರ
ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆಯಲಿದೆ.  ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಉಳಿತಾಯಕ್ಕೆ  ಹೆಚ್ಚಿನ ಆದ್ಯತೆ ನೀಡಿ. ದೊಡ್ಡ ಕಾರ್ಯಗಳನ್ನು   ಮಾಡುವ ಮುನ್ನ ಯೋಚಿಸಿ. ಮಹಿಳೆಯರಿಗೆ ಆರ್ಥಿಕವಾಗಿ
ಮುನ್ನಡೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಶುಭ ಫಲ.ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆಯಲಿದೆ.

ಕುಂಭ
ಹಣಕಾಸಿನ ತೊಂದರೆಯಿಂದ ಸ್ವಲ್ಪ ಹೊರಗೆ ಬರುವಿರಿ.  ಉದ್ಯೋಗ ಬದಲಾವಣೆ ಸಾಧ್ಯತೆ. ದೂರದ  ಪ್ರಯಾಣ ಮಾಡುವ ಅನಿವಾರ್ಯತೆ ಬರಲಿದೆ.  ಬಂಧುಗಳೊಂದಿಗೆ ಉತ್ತಮ ಸಂಬಂಧ. ಮಕ್ಕಳ ಶೈಕ್ಷಣಿಕ
ಪ್ರಗತಿಯಿಂದ ನೆಮ್ಮದಿ. ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಲ್ಲಿ  ವ್ಯತ್ಯಯ. ಮನೆಯಲ್ಲಿ ಸಂಭ್ರಮ.  

ಮೀನಾ

ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆಯಲಿದೆ.  ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಉಳಿತಾಯಕ್ಕೆ  ಹೆಚ್ಚಿನ ಆದ್ಯತೆ ನೀಡಿ. ದೊಡ್ಡ ಕಾರ್ಯಗಳನ್ನು  ಮಾಡುವ ಮುನ್ನ ಯೋಚಿಸಿ. ಮಹಿಳೆಯರಿಗೆ ಆರ್ಥಿಕವಾಗಿ
ಮುನ್ನಡೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಶುಭ ಫಲ. 

 

loader