ಈ ದೇವಾಲಯದಲ್ಲಿ ಭಕ್ತರಿಗೆ ಬಂಗಾರವೇ ಪ್ರಸಾದ

This temple gives away Gold as prasad!
Highlights

ದೇವಾಲಯಗಳಲ್ಲಿ ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ನೋಡಿದ್ದೀರಿ. ಆದರೆ ದೇವಾಲಯದಲ್ಲಿ ಬಂಗಾರವನ್ನು ಪ್ರಸಾದ ರೂಪದಲ್ಲಿ ನೀಡಿದರೆ ಹೇಗಿರುತ್ತದೆ..?ಹೌದು ಇಲ್ಲೊಂದು  ದೇವಾಲಯದಲ್ಲಿ ಸಿಹಿಯಾದ ಪ್ರಸಾದದ ಬದಲಾಗಿ ಬಂಗಾರವನ್ನೇ ಭಕ್ತರಿಗೆ ನೀಡಲಾಗುತ್ತದೆ. 

ಮುಂಬೈ :  ದೇವಾಲಯಗಳಲ್ಲಿ ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ನೋಡಿದ್ದೀರಿ. ಆದರೆ ದೇವಾಲಯದಲ್ಲಿ ಬಂಗಾರವನ್ನು ಪ್ರಸಾದ ರೂಪದಲ್ಲಿ ನೀಡಿದರೆ ಹೇಗಿರುತ್ತದೆ..?ಹೌದು ಇಲ್ಲೊಂದು  ದೇವಾಲಯದಲ್ಲಿ ಸಿಹಿಯಾದ ಪ್ರಸಾದದ ಬದಲಾಗಿ ಬಂಗಾರವನ್ನೇ ಭಕ್ತರಿಗೆ ನೀಡಲಾಗುತ್ತದೆ. 

ಮಧ್ಯ ಪ್ರದೇಶದ ರತ್ಲಾಮ್ ಪ್ರದೇಶದಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಬಂದ ಭಕ್ತರಿಗೆಲ್ಲರಿಗೂ ಕೂಡ ದೀಪಾವಳಿ ಸಂದರ್ಭದಲ್ಲಿ ಬಂಗಾರ ಅಥವಾ ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದ್ದರಿಂದ ಸಾವಿರಾರು ಮೈಲಿ ದೂರಗಳಿಂದ ಈ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. 

ಬಂದ ಭಕ್ತರು ಇಲ್ಲಿ ಬಂಗಾರ, ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ಸ್ವೀಕಾರ ಮಾಡಿದಲ್ಲಿ ಜೀವನದಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯು ಇದೆ. ಅಲ್ಲದೇ ಇಲ್ಲಿ ನೀಡಲಾಗುವ ಬಂಗಾರವನ್ನು ಯಾರೂ ಆಭರಣ ಎಂದು ಪರಿಗಣಿಸುವುದಿಲ್ಲ ಬದಲಾಗಿ ದೇವರಿಂದ ಸಿಕ್ಕಿದ ಮಹಾನ್ ಪ್ರಸಾದ ಎಂದೇ ಭಾವಿಸುತ್ತಾರೆ. 

loader