ಬಾಲಿವುಡ್‌ ಮತ್ತು ಹಾಲಿವುಡ್‌ಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕ ಚೋಪ್ರಾ ಮದುವೆ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಮೌನ ಮುರಿದಿದ್ದಾರೆ.

ಪ್ರಿಯಾಂಕ ಚೋಪ್ರಾ ತಮ್ಮ ಮದುವೆಯಾಗಲು ರೆಡಿ ಇಲ್ವಂತೆ. ಹೀಗೆ ಹೇಳಿದ್ದು ಸ್ವತಃ ಪ್ರಿಯಾಂಕ ತಾಯಿ ಡಾ. ಮಧು ಚೋಪ್ರಾ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮಧು ಚೋಪ್ರಾ ಮಗಳ ಮದುವೆ ಕುರಿತು ಮಾತನಾಡಿದ್ದಾರೆ. ಓರ್ವ ತಾಯಿಯಾಗಿ ಪ್ರಿಯಾಂಕ ಮದುವೆಯ ಬಗ್ಗೆ ಮಧು ಚೋಪ್ರಾಗೆ ಚಿಂತೆ ಇದೆಯಂತೆ. ಆದರೆ ಪಿಗ್ಗಿ ಮಾತ್ರ ಮದುವೆಗೆ  ಗ್ರೀನ್‌ ಸಿಗ್ನಲ್‌ ಕೊಡುತ್ತಿಲ್ವಂತೆ. 33 ವರ್ಷ ಕಳೆದ್ರು ಪಿಗ್ಗಿಗೆ ಸರಿಯಾದ ವರ ಸಿಕ್ತಾ ಇಲ್ವಂತೆ. ಹೀಗಾಗಿ ಪ್ರಿಯಾಂಕ ಚೋಪ್ರಾ ಮದುವೆ ಬಗ್ಗೆ ಅಷ್ಟೊಂದು ಯೋಚನೆ ಮಾಡ್ತಾ ಇಲ್ಲಾ ಎಂದು ಪಿಗ್ಗಿ ತಾಯಿ ಮಧು ಚೋಪ್ರಾ ಹೇಳಿದ್ದಾರೆ.