ಆರ್‌ಎಸ್‌ಎಸ್‌ ಕುರಿತು ಅಟಲ್ ನಿಲುವೇನು?! ಸಂಘ ಬಿಜೆಪಿ ಕಂಟ್ರೋಲ್ ಮಾಡುವ ಆರೋಪ ನಿರಾಕರಿಸಿದ್ದ ವಾಜಪೇಯಿ! ಸಂಘದ ಒಡನಾಟ ಸ್ಮರಿಸಿದ್ದ ಮಾಜಿ ಪ್ರಧಾನಿ 

ನವದೆಹಲಿ(ಆ.16): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ವಿಧಿವಶರಾಗಿದ್ದಾರೆ. ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಆರ್ ಎಸ್ ಎಸ್ ಸಿದ್ಧಾಂತಕ್ಕೆ ಮಾರು ಹೋಗಿದ್ದ ಅಟಲ್, ಜನಸಂಘದ ಸ್ಥಾಪನೆ, ಬಿಜೆಪಿ ಉದಯದ ನಂತರವೂ ಆರ್‌ಎಸ್‌ಎಸ್ ಜೊತೆ ಒಡನಾಟ ಹೊಂದಿದ್ದರು.

ಕೆಲ ವರ್ಷಗಳ ಹಿಂದೆ ಜನಪ್ರಿಯ ಕಾರ್ಯಕ್ರಮ ‘ಆಪ್ ಕೀ ಅದಾಲತ್’ ನಲ್ಲಿ ಭಾಗವಹಿಸಿದ್ದ ಅಟಲ್, ಆರ್‌ಎಸ್‌ಎಸ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆರ್‌ಎಸ್‌ಎಸ್ ಬಿಜೆಪಿಯನ್ನು ಕಂಟ್ರೋಲ್ ಮಾಡುತ್ತಿದೆ ಎಂಬ ಪ್ರಶ್ನೆಗೆ ತಾಳ್ಮೆಯಿಂದಲೇ ಉತ್ತರಿಸಿದ್ದ ವಾಜಪೇಯಿ, ಇದು ಕೇವಲ ಊಹಾಪೋಹ ಎಂದು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.