. ಆದರೆ, ಏನು ಮಾಡುವುದು ಆಕೆ ಯಾವ ಅಪರಾಧವನ್ನೂ ಮಾಡಿಲ್ಲ. ಆದರೂ ಆಕೆಯ ಕೊನೆಯಾಸೆ ಈಡೇರಿದೆ

ಜೀವನದಲ್ಲಿ ಎಲ್ಲರಿಗೂ ನಾನಾ ರೀತಿಯ ಆಸೆಗಳು ಇರುತ್ತವೆ. ಆದರೆ, ನೆದರ್ಲೆಂಡ್‌ನ 99 ತುಂಬಿದ ಮಹಿಳೆಯೊಬ್ಬಳಿಗೆ ಜೀವನದಲ್ಲಿ ಒಮ್ಮೆಯಾದರೂ ಜೈಲು ಸೇರಬೇಕು ಎಂಬ ಮಹದಾಸೆ ಇತ್ತಂತೆ. ಆದರೆ, ಏನು ಮಾಡುವುದು ಆಕೆ ಯಾವ ಅಪರಾಧವನ್ನೂ ಮಾಡಿಲ್ಲ. ಆದರೂ ಆಕೆಯ ಕೊನೆಯಾಸೆ ಈಡೇರಿದೆ. ನಿಜ್ಮೆಗೆನ್ ಜೂಯಿಡ್ ಎಂಬಾಕೆಯ ಸಂಬಂಗಳ ಕೋರಿಕೆಯಂತೆ ಪೊಲೀಸರು ಆಕೆಗೆ ಕೋಳ ತೊಡಿಸಿ ಜೈಲಿಗೆ ಕಳುಹಿಸಿದ್ದಾರೆ. ಎಲ್ಲರೂ ಜೈಲಿಗೆ ಹೋಗಲು ಹಿಂಜರಿದರೆ ಜೂಯಿಡ್ ಮಾತ್ರ ಫುಲ್ ಖುಷ್ ಆಗಿದ್ದಾಳೆ.