ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 7 ಮುಸಲ್ಮಾನ ರಾಷ್ಟ್ರಗಳ ಪ್ರಜೆಗಳಿಗೆ ನಿಷೇಧ ಹೇರಿರುವುದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು ಗೊತ್ತೇ ಇದೆ. ಇದು ಮುಸ್ಲೀಮರ ನಿಷೇಧವಲ್ಲ. ಬದಲಿಗೆ ವಲಸೆ ಪ್ರಕ್ರಿಯೆಯನ್ನು ತಡೆಗಟ್ಟುವುದಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ವಾಷಿಂಗ್ಟನ್ (ಜ.30): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 7 ಮುಸಲ್ಮಾನ ರಾಷ್ಟ್ರಗಳ ಪ್ರಜೆಗಳಿಗೆ ನಿಷೇಧ ಹೇರಿರುವುದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು ಗೊತ್ತೇ ಇದೆ. ಇದು ಮುಸ್ಲೀಮರ ನಿಷೇಧವಲ್ಲ. ಬದಲಿಗೆ ವಲಸೆ ಪ್ರಕ್ರಿಯೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ವಲಸಿಗರಿಗೆ ಅಮೆರಿಕಾ ಹೆಮ್ಮೆಯ ದೇಶ. ದಬ್ಬಾಳಿಕೆಗೆ ಒಳಗಾಗಿ ಪಲಾಯನಗೈದವರ ಬಗ್ಗೆ ನಮಗೆ ಸಹಾನುಭೂತಿಯಿದೆ. ನಮ್ಮ ದೇಶದ ನಾಗರೀಕರು ಮತ್ತು ಗಡಿ ರಕ್ಷಣೆಗಾಗಿ ನಾನು ಈ ರೀತಿ ಮಾಡಿದ್ದೇವೆ. ಅಮೆರಿಕಾ ಯಾವತ್ತೂ ಮುಕ್ತ ಮತ್ತು ಕೆಚ್ಚೆದೆಯ ತವರು ಎಂದು ಟ್ರಂಪ್ ಹೇಳಿದ್ದಾರೆ.
7 ಮುಸಲ್ಮಾನ ದೇಶಗಳ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿರುವುದು ಧರ್ಮದ ಆಧಾರದ ಮೇಲಲ್ಲ. ಭಯೋತ್ಪಾದನೆಯಿಂದ ನಮ್ಮ ದೇಶವನ್ನು ರಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ಆದೇಶದಿಂದ 40 ಮುಸಲ್ಮಾನ ದೇಶಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
