ಅಮೆರಿಕ ಗ್ರೀನ್ ಕಾರ್ಡ್ ಪಡೆಯಲು ಯತ್ನ: ವರದಿಗೆ ಪಾಟೀಲ್ ಹೇಳಿದ್ದೇನು?

news | Saturday, March 24th, 2018
Suvarna Web Desk
Highlights

ಸುವರ್ಣ ನ್ಯೂಸ್ ಭಿತ್ತರಿಸಿದ ಬಿಗ್ ಬ್ರೇಕಿಂಗ್ ನ್ಯೂಸ್‌ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿರುವುದು ಹೀಗೆ....

ಬೆಂಗಳೂರು: ಜಲಸಂಪನ್ಮೂಲ ಎಂ.ಬಿ.ಪಾಟೀಲ್ ಅವರ ಪತ್ನಿ ತಮ್ಮ ಮಕ್ಕಳೊಂದಿಗೆ ಅಮೆರಿಕದಲ್ಲಿಯೇ ನೆಲೆಸಲು ಯತ್ನಿಸುತ್ತಿದ್ದು, ಈ ಸಂಬಂಧವಾಗಿ LCR ಪಾರ್ಟ್ ನರ್ಸ್ (LLC)ಹಾಗೂ ಬರ್ನ್ ಸೆನ್ & ಲೊವಿ (LLP)ಎಂಬ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಲು ಹಣ ಸಂದಾಯ ಮಾಡಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿದ್ದು, ಖುದ್ದು ಎಂ.ಬಿ.ಪಾಟೀಲ್ ಅವರೇ ಈ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಮಗ ಅಮೆರಿಕದಲ್ಲಿ ಓದಿದ್ದು, ಅಲ್ಲಿಯೇ ನೆಲಸಲು ತಯಾರಿ ನಡೆಸುತ್ತಿರುವುದು ಹೌದು. ಆದರೆ, ಪತ್ನಿ ಅಂಥ ಯಾವುದೇ ಯತ್ನಗಳಿಗೂ ಕೈ ಹಾಕಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸುವರ್ಣ ನ್ಯೂಸ್‌ಗೆ ಸಿಕ್ಕ ಮಾಹಿತಿಯಲ್ಲಿ ಹಣ ಸಂದಾಯ ಮಾಡಿರುವುದು ಸಚಿವರ ಪತ್ನಿ ಆಶಾವೆಂದು ಬೆಳಕಿಗೆ ಬಂದಿದೆ. ಇದಕ್ಕೆ ಮಾರ್ಚ್ 25ರಂದು ಖುದ್ದು ಪತ್ನಿ ಹಾಗೂ ಮಗ ಬಂದು ಸುವರ್ಣ ನ್ಯೂಸ್ ಮೂಲಕವೇ ಸ್ಪಷ್ಟನೆ ನೀಡಲಿದ್ದಾರೆಂದು ಪಾಟೀಲ್ ಅವರು ಹೇಳಿದ್ದಾರೆ.
 

Comments 0
Add Comment