ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ನೋಟುಗಳು ಅಪನಗದೀಕರಣ ಅಂತ ಘೋಷಿಸಿದ ಮೇಲೆ ದೇಶದಲ್ಲಿ ಒಂಥರಾ ಆರ್ಥಿಕ ಎಮರ್ಜೆನ್ಸಿ ಕಂಡು ಬರ್ತಿದೆ. ಕೇಂದ್ರ ಸರ್ಕಾರ ಯಾರಿಗೆ ಬಿಸಿ ಮುಟ್ಟಿಸಬೇಕು ಅಂತ ಹೊರಟಿದೆಯೋ ಅವರು ಐದಾರಿ ಹಂತಗಳ ವಾಮಮಾರ್ಗಗಳ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ.
ನವದೆಹಲಿ(ಡಿ.11): ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ರಣಕಹಳೆ ಊದಿದ್ದಾರೆ. ಆದ್ರೂ ಕಾಳಧನಿಕರು ರಂಗೋಲಿ ಕೆಳಗೆ ನುಗ್ಗೋದಿಕೆ ಹಲವು ತಂತ್ರಗಳನ್ನ ಹುಡುಕಿಕೊಂಡಿದ್ದಾರೆ. ಆ ದಾರಿಗಳು ಯಾವುದು? ಹೇಗೆಲ್ಲಾ ನಡೆಯುತ್ತೆ ಕಪ್ಪು-ಬಿಳಿ ದಂಧೆ? ನೋಟು ಕಳ್ಳತನ ಚಮತ್ಕಾರ ಎಂಥಾದ್ದು ಎನ್ನುವ ಡಿಟೇಲ್ಸ್ ಇಲ್ಲಿದೆ ನೋಡಿ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ನೋಟುಗಳು ಅಪನಗದೀಕರಣ ಅಂತ ಘೋಷಿಸಿದ ಮೇಲೆ ದೇಶದಲ್ಲಿ ಒಂಥರಾ ಆರ್ಥಿಕ ಎಮರ್ಜೆನ್ಸಿ ಕಂಡು ಬರ್ತಿದೆ. ಕೇಂದ್ರ ಸರ್ಕಾರ ಯಾರಿಗೆ ಬಿಸಿ ಮುಟ್ಟಿಸಬೇಕು ಅಂತ ಹೊರಟಿದೆಯೋ ಅವರು ಐದಾರಿ ಹಂತಗಳ ವಾಮಮಾರ್ಗಗಳ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಮೊದಲನೆಯದು.
ನೋಟು ಕಳ್ಳರು
1. ಕಪ್ಪು ಕುಳಗಳಿಂದ ದಂಧೆ
ರಿಸರ್ವ್ ಬ್ಯಾಂಕ್ಗಳಿಂದ ಅಧೀನ ಬ್ಯಾಂಕ್ಗಳನ್ನ ತಲುಪೋ ಹೊಸ ನೋಟುಗಳನ್ನ ನಕಲಿ ದಾಖಲಾತಿಗಳನ್ನ ನೀಡಿ ಕೆಲ ಮಧ್ಯವರ್ತಿಗಳು ಅಥವಾ ಕಾಳಧನಿಕರು ಬದಲಾವಣೆ ಮಾಡುತ್ತಾರೆ. ವಿವಿಧ ರೀತಿಯ ಗುರುತಿನ ಚೀಟಿಗಳಾದ ಎಲೆಕ್ಷನ್ ಐಡಿ, ಪ್ಯಾನ್ ಕಾರ್ಡ್ ಪಾಸ್ ಪೋರ್ಟ್, ಆಧಾರ ಕಾರ್ಡ್ ಚೀಟಿ ಹೊಂದಿರೋ ಸಾರ್ವಜನಿಕರನ್ನ ದಂಧೆಕೋರರು ಬಳಸಿಕೊಳ್ತಾರೆ. ಸಾರ್ವಜನಿಕರಿಗೆ ಕಮಿಷನ್ ಆಸೆ ತೋರಿಸಿ ಬ್ಯಾಂಕ್ಗಳಿಗೆ ಅಲೆದಾಡಿಸಿ ಲಕ್ಷಾಂತರ ರೂಪಾಯಿ ಕಪ್ಪು ಹಣ ವೈಟ್ ಮಾಡಿಕೊಳ್ತಾರೆ. ಇದ್ರಿಂದ ಕಪ್ಪು ಕುಳಗಳು 2 ಸಾವಿರ ಮುಖಬೆಲೆಯ ಹೆಚ್ಚು ಹೆಚ್ಚು ನೋಟುಗಳು ಒಂದೇ ಕಡೆ ಶೇಖರಣೆ ಆಗುತ್ತೆ.
2. ಬ್ಯಾಂಕ್ ಅಧಿಕಾರಿಗಳಿಂದ ದಂಧೆ
ಎರಡನೆಯ ಹಂತ ಅಂದರೆ, ಬ್ಯಾಂಕ್ ಅಧಿಕಾರಿಗಳ ದಂಧೆ. ಬ್ಯಾಂಕ್' ಗಳಲ್ಲಿರುವ ಹೊಸ ನೋಟುಗಳನ್ನ ಸಹಸ್ರಾರು ಖಾತೆದಾರರಿಗೆ ವಿತರಿಸಬೇಕು. ಆದರೆ, ಬ್ಯಾಂಕ್ ಸಿಬ್ಬಂದಿಗಳೇ ಗ್ರಾಹಕರ ಗುರುತಿನ ಚೀಟಿಗಳ ನಕಲು ಬಳಸಿಕೊಂಡು, ಕಾನೂನು ಬದ್ದವಾಗಿಯೇ ಸಾರ್ವಜನಿಕರಿಗೆ ಹಣ ಬದಲಾಯಿಸಿದಂತೆ ದಾಖಲೆಗಳನ್ನ ಸೃಷ್ಟಿ ಮಾಡುತ್ತಿವೆ. ಜೊತೆಗೆ ಬ್ಯಾಂಕ್ನಲ್ಲಿರುವ ಬಳಕೆಯಲ್ಲಿಲ್ಲದ ಅಕೌಂಟ್ಗಳನ್ನ ಅಕ್ರಮವಾಗಿ ಲಾಭಕ್ಕಾಗಿ ಬಳಸುತ್ತಾರೆ. ಇದ್ರಿಂದಾಗಿ ಬ್ಯಾಂಕ್'ನಲ್ಲಿದ್ದ ಪಿಂಕ್ ನೋಟುಗಳನ್ನ ಕಪ್ಪು ಕುಳಗಳಿಗೆ ಸುಲಭವಾಗಿ ರವಾನಿಸುತ್ತಾರೆ. ಇಲ್ಲಿ ಬ್ಯಾಂಕ್ ಸಿಬ್ಬಂದಿಯೇ ಹಣ ಬದಲಾವಣೆಯ ಕಿಂಗ್ಪಿನ್ಗಳು. ಈ ಮೂಲಕ ಕಾನೂನು ಬದ್ಧವಾಗಿಯೇ ಕಮಿಷನ್ ಆಧಾರಣದಲ್ಲಿ ಹಣ ಪೂರೈಸ್ತಾರೆ. ಕೆಲವರ ಕೈಯಲ್ಲಿ ಹೆಚ್ಚು ಪಿಂಕ್ ನೋಟುಗಳು ದೊರೆಯುವಲ್ಲಿ ಬ್ಯಾಂಕ್ ಸಿಬ್ಬಂದಿಗಳೂ ಪಾತ್ರ ಬಹು ದೊಡ್ಡದು.
3. ಏಜೆನ್ಸಿಗಳಿಂದ ದಂಧೆ
ಮೂರನೇ ಹಂತವೇ ಏಜೆನ್ಸಿಗಳ ನೇರ ಪಾತ್ರ. ಎಟಿಎಂಗಳಿಗೆ ಹಣ ಹಾಕುವ ಕಾರ್ಯವನ್ನು ಹಣ ಡಿಸ್ಟ್ರಿಬ್ಯೂಟ್ ಮಾಡುವ ಕೆಲ್ಸ ಖಾಸಗಿ ಏಜೆನ್ಸಿಗಳು ಮಾಡುತ್ತವೆ. ಎಟಿಎಂ ಕೇಂದ್ರಗಳಿಗೆ ಹಣ ಹಾಕಲು ಬ್ಯಾಂಕಗಳಿಂದ ಸಂಗ್ರಹಿಸಲಾಗುತ್ತೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ಕಮೀಷನ್ ಆಧಾರದ ಮೇಲೆ ಬ್ಲಾಕ್ ಅಂಡ್ ವೈಟ್ ಅವ್ಯವಹಾರಕ್ಕೆ ಏಜೆನ್ಸಿಗಳು ಬಳಸಿಕೊಳ್ತಾವೆ. ಈ ಮೂಲಕ ಸಾರ್ವಜನಿಕರಿಗೆ ಸಿಗಬೇಕಾಗಿದ್ದ 2 ಸಾವಿರದ ನೋಟುಗಳು ಸುಲಭವಾಗಿ ಕಪ್ಪು ಕುಳಗಳ ಪಾಲಾಗುತ್ತೆ. ಪರಿಣಾಮ ಎಟಿಎಂಗಳು ಬರಿದಾಗಿ ನೋ ಕ್ಯಾಶ್ ಅನ್ನೋ ಬೋರ್ಡ್ ಕಾಣುವಂತಾಗುತ್ತೆ.ಇಷ್ಟೇ ಅಲ್ಲ, ಇನ್ನೂ ಎರಡು ಪ್ರಮುಖ ಹಂತಗಳಿವೆ. ಇಲ್ಲೂ ಕಪ್ಪುಕುಳಗಳು ಶ್ರೀಸಾಮನ್ಯ ಹಾಗೂ ಕೇಂದ್ರ ಸರ್ಕಾರವನ್ನು ವಂಚಿಸಿ ಅರ್ಥಿಕ ಪರಿಸ್ಥಿತಿಯನ್ನ ಹಿಡಿತಕ್ಕೆ ಯತ್ನಿಸುತ್ತಾರೆ.
