ಬೆಂಗಳೂರು :  ಸ್ಯಾಂಡಲ್ ವುಡ್ ಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.  ಚಂದನವನದ ನಟ ನಿರ್ದೇಶಕರ ಮನೆ ಮೇಲೆ ದಾಳಿ ಮಾಡಲಾಗಿದೆ. 

ಈಡೀ ಸ್ಯಾಂಡಲ್ ವುಡ್ ಗೆ ಬಿಗ್ ಶಾಕ್ ನೀಡುವ ಮುನ್ನ ಐಟಿ ಅಧಿಕಾರಿಗಳು ಮಾಸ್ಟರ್ ಪ್ಲಾನ್ ನಡೆಸಿದ್ದರು.  ಕಳೆದ ಒಂದು ವಾರದಿಂದಲೂ ಕೂಡ ದಾಳಿಗಾಗಿ ಪ್ಲಾನ್ ಮಾಡಿದ್ದರು. 

ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್ : ಶಿವಣ್ಣ, ಕಿಚ್ಚ, ಯಶ್ ಮನೆಗೂ ಐಟಿ ದಾಳಿ

ನಟರು ಹಾಗೂ ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ,  ಸೂಕ್ತ ದಾಖಲೆಗಳ ಮಾಹಿತಿ ಸಂಗ್ರಹಿಸಿದ್ದರು. ಕೋರ್ಟ್ ನಲ್ಲಿ ದಾಳಿ ಸಂಬಂಧ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲು ಅನುಮತಿ ಪಡೆದಿದ್ದರು.  ಬಳಿಕ ಗುರುವಾರ ಬೆಳ್ಳಂಬೆಳಗ್ಗೆ  ಏಕಕಾಲದಲ್ಲಿ  ದಾಳಿ ಮಾಡುವ ಮಹಾಪ್ಲಾನ್ ಮಾಡಿದರು.  

ಮೋದಿಗೂ ಸ್ಯಾಂಡಲ್‌ವುಡ್ ಐಟಿ ದಾಳಿಗೂ ಇದೆಯಾ ಲಿಂಕ್?

ಪ್ಲಾನ್ ನಂತೆ ಇಂದು 200 ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಖಾಸಗಿ ವಾಹನಗಳಲ್ಲಿ ಬಂದು  ದಾಳಿ ಮಾಡಿದರು.

ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್,  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್,  ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು. ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸ,  ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ.  ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.