ಸ್ಯಾಂಡಲ್ ವುಡ್ ಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗುರುವಾರ ಒಟ್ಟು 60 ಕಡೆ ದಾಳಿ ಮಾಡಿದ ಅಧಿಕಾರಿಗಳು ಶಿವರಾಜ್ ಕುಮಾರ್, ಯಶ್ ಹಾಗೂ ಸುದೀಪ್ ಮನೆ ಮೇಲೂ ದಾಳಿ ಮಾಡಿದ್ದಾರೆ.
ಬೆಂಗಳೂರು (ಜ.03): ಸ್ಯಾಂಡಲ್ವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಇಂದು ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟಿದ್ದಾರೆ ಐಟಿ ಅಧಿಕಾರಿಗಳು.
ಒಟ್ಟು 60 ಕಡೆ ದಾಳಿಯಾಗಿದ್ದು ಇದೀಗ ಸುದೀಪ್ ಹಾಗೂ ಯಶ್ ಹಾಗೂ ಶಿವರಾಜ್ ಕುಮಾರ್ ಗೂ ಕೂಡ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್ ! ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ
ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಯಶ್ ಅಭಿನಯದ ಕೆಜಿಎಫ್ ಚಿತ್ರ ಸದ್ಯ ಸದ್ದು ಮಾಡಿತ್ತಿದೆ. ಇತ್ತ ನಟ ಸುದೀಪ್ ವಿಲನ್ ಚಿತ್ರ ಕೆಲ ದಿನಗಳ ಹಿಂದಷ್ಟೇ ಸುದ್ದಿ ಮಾಡಿತ್ತು. ಬೆಳ್ಳಂಬೆಳಗ್ಗೆ 7 ಗಂಟೆಯಿಂದಲೇ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
