ಇದು ಲವ್ ಮೇನಿಯಾ ಯುವತಿಯೊಬ್ಬಳು ಎರಡೆರಡು ಲವ್ ಮಾಡಿದರೂ  ಒಂದೂ ಸಕ್ಸಸ್ ಆಗುವ ಲಕ್ಷಣ ಕಾಣುತ್ತಿಲ್ಲ.  ಫಸ್ಟ್ ಪಿಯುಸಿಯಲ್ಲೊಂದು , ಫಸ್ಟ್ ಬಿಎಯಲ್ಲೊಂದು  ಒಬ್ಬ ಲವ್ವರ್ ಜೈಲು ಪಾಲಾಗಿದ್ದರೆ,  ಮತ್ತೊಬ್ಬ ಎಂಗೇಜ್'ಮೆಂಟ್ ನಂತರ  ಮದುವೆಗೆ ನಾ ಒಲ್ಲೆ ಹೇಳುತ್ತಿದ್ದಾನೆ.

ಶಿವಮೊಗ್ಗ (ನ.21): ಇದು ಲವ್ ಮೇನಿಯಾ ಯುವತಿಯೊಬ್ಬಳು ಎರಡೆರಡು ಲವ್ ಮಾಡಿದರೂ  ಒಂದೂ ಸಕ್ಸಸ್ ಆಗುವ ಲಕ್ಷಣ ಕಾಣುತ್ತಿಲ್ಲ.  ಫಸ್ಟ್ ಪಿಯುಸಿಯಲ್ಲೊಂದು , ಫಸ್ಟ್ ಬಿಎಯಲ್ಲೊಂದು  ಒಬ್ಬ ಲವ್ವರ್ ಜೈಲು ಪಾಲಾಗಿದ್ದರೆ,  ಮತ್ತೊಬ್ಬ ಎಂಗೇಜ್'ಮೆಂಟ್ ನಂತರ  ಮದುವೆಗೆ ನಾ ಒಲ್ಲೆ ಹೇಳುತ್ತಿದ್ದಾನೆ.

ಇದು ಜೀವನದಲ್ಲಿ ಎರಡೆರಡು ಲವ್ ಮಾಡಿ ಎಡವಟ್ಟು ಮಾಡಿಕೊಂಡವಳ ಕತೆ.  ಅಪ್ರಾಪ್ತ ವಯಸ್ಸಿನಲ್ಲಿ ಒಬ್ಬನ ಜೊತೆ ಲವ್ವಿ ಡವ್ವಿ. ವಯಸ್ಸಿಗೆ ಬಂದ ಮೇಲೆ ಮತ್ತೊಬ್ಬನ ಜೊತೆ ಪ್ರೇಮಗೀತೆ. ಇದೀಗ ಇಬ್ಬರ ಜೊತೆಯೂ ಮದುವೆಯಾಗದೇ ಪರದಾಡುವಂತಾಗಿದೆ. ಇಂಥದ್ದೊಂದು ಡಬಲ್ ಲವ್  ಕಹಾನಿಗೆ ಸಾಕ್ಷಿಯಾಗಿದ್ದು ಶಿವಮೊಗ್ಗದ ಮಹಿಳಾ ಪೋಲಿಸ್ ಠಾಣೆ.

ಶಿವಮೊಗ್ಗದ ಯುವತಿಯೊಬ್ಬಳಿಗೂ ವೃತ್ತಿಯಲ್ಲಿ ಚಾಲಕನಾಗಿರುವ ಯುವಕನಿಗೂ  ಕಳೆದ 4-5 ತಿಂಗಳ ಹಿಂದೆ ಲವ್ ಆಗಿದೆ. ನಂತರ ಎರಡು ಕುಟುಂಬದವರು  ಒಪ್ಪಿಕೊಂಡು ಕಳೆದ ತಿಂಗಳ 29 ರಂದು ನಿಶ್ಚಿತಾರ್ಥ ಮಾಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಫೋಟೋ ನೋಡಿದ ಆಕೆಯ ಸ್ನೇಹಿತ  ಈ ಹಿಂದೆ ಅವಳು  ಡ್ರೈವರ್ ಜೊತೆ ಓಡಿಹೋಗಿದ್ದಳು ಅನ್ನೋ ಗುಟ್ಟನ್ನ ಬಹಿರಂಗೊಳಿಸಿದ್ದಾನೆ.

2 ವರ್ಷದ ಹಿಂದೆ ಅವಳುಫಸ್ಟ್ ಪಿಯುಸಿ ಓದುತ್ತಿದ್ದಾಗ  ಯುವಕನ ಜೊತೆ ಓಡಿ ಹೋಗಿದ್ದಳಂತೆ. ಅಪ್ರಾಪ್ತಳ ಸಹವಾಸ ಮಾಡಿದ್ದಕ್ಕೆ  ಯುವಕ  ಪೋಕ್ಸೋ ಕಾಯ್ದೆಯಡಿ ಜೈಲು ಪಾಲಾಗಿದ್ದ. ಈಗ ಫಸ್ಟ್ ಬಿಎ ಓದುತ್ತಿರುವ ಯುವತಿ , ಇನ್ನೋರ್ವ ಯುವಕನ ಲವ್ ಮಾಡಿ ಮದುವೆಯಾಗಲು ಹೊರಟಿದ್ದಳು.  ಆದರೀಗ  ಪ್ರೇಯಸಿಯ ಹಳೇ ಲವ್ ಸ್ಟೋರಿ ಕೇಳಿ ಆತ ಮದುವೆಗೆ ನಿರಾಕರಿಸಿದ್ದು,  ಆಕೆ ಈತನ ವಿರುದ್ಧ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.