ಕಳೆದ ಎರಡು ವರ್ಷಗಳಲ್ಲಿ ವರ್ಷದ 365 ದಿನಗಳಲ್ಲೂ ಯಾವುದೇ ಬ್ರೇಕ್ ಇಲ್ಲದೆ ತರಗತಿಗಳನ್ನು ನಡೆಸಲಾಗಿದೆ. ರಾಜಸ್ಥಾನದ ಅಲ್ವಾರ್ನ ಉಜೋಲಿಯ ಸರ್ಕಾರಿ ಮಾದರಿ ಹಿರಿಯ ಪ್ರೌಢ ಶಾಲೆಯಲ್ಲಿ ಯಾವುದೇ ವಾರದ ರಜೆ ಇಲ್ಲ, ಚಳಿಗಾಲ ಅಥವಾ ಬೇಸಿಗೆಯ ವಾರ್ಷಿಕ ರಜೆ ಇಲ್ಲ, ಹಬ್ಬದ ರಜೆಯೂ ಇಲ್ಲದೆ ತರಗತಿಗಳನ್ನು ನಡೆಸಲಾಗಿದೆ.

ಅಲ್ವಾರ್(ಡಿ.4): ಮಕ್ಕಳು ಶಾಲೆಗೆ ಯಾವಾಗ ರಜೆ ಸಿಗುತ್ತದೆ ಎಂದು ಕಾದುಕೊಂಡಿರುತ್ತಾರೆ. ಅಂತಹುದರಲ್ಲಿ, ರಾಜಸ್ಥಾನದ ಸರ್ಕಾರಿ ಶಾಲೆಯೊಂದರಲ್ಲಿ 2 ವರ್ಷಗಳಿಂದ ಒಂದು ದಿನವೂ ರಜೆ ನೀಡದೆ ತರಗತಿ ನಡೆಸಲಾಗಿದೆಯಂತೆ.

ಕಳೆದ ಎರಡು ವರ್ಷಗಳಲ್ಲಿ ವರ್ಷದ 365 ದಿನಗಳಲ್ಲೂ ಯಾವುದೇ ಬ್ರೇಕ್ ಇಲ್ಲದೆ ತರಗತಿಗಳನ್ನು ನಡೆಸಲಾಗಿದೆ. ರಾಜಸ್ಥಾನದ ಅಲ್ವಾರ್ನ ಉಜೋಲಿಯ ಸರ್ಕಾರಿ ಮಾದರಿ ಹಿರಿಯ ಪ್ರೌಢ ಶಾಲೆಯಲ್ಲಿ ಯಾವುದೇ ವಾರದ ರಜೆ ಇಲ್ಲ, ಚಳಿಗಾಲ ಅಥವಾ ಬೇಸಿಗೆಯ ವಾರ್ಷಿಕ ರಜೆ ಇಲ್ಲ, ಹಬ್ಬದ ರಜೆಯೂ ಇಲ್ಲದೆ ತರಗತಿಗಳನ್ನು ನಡೆಸಲಾಗಿದೆ.

ಇಷ್ಟೆಲ್ಲಾ ಪರಿಶ್ರಮದ - ಫಲವಾಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿದ್ದಾರೆ.