ಬರಗಾಲದಲ್ಲಿ ಏನು ಬೇಸಾಯ ಮಾಡುವುದು . ಇರುವ ಅಲ್ಪ ಸ್ವಲ್ಪ ನೀರಲ್ಲಿ ಹೇಗೆ ಬೆಳೆ ತೆಗೆಯುವುದು ಅಂತಾ ಅನ್ನಿಸುವಂತಿದೆ ಉತ್ತರ ಕರ್ನಾಟಕ ರೈತರ ಪರಿಸ್ಥಿತಿ. ಆದರೆ ಬರಗಾಲದಲ್ಲೂ ಇರುವ ಸ್ವಲ್ಪ ನೀರಿನಲ್ಲೇ ನಾಳೆ ಬೆಳೆದು ರೈತನೊಬ್ಬ ಭರಪೂರಾ ಫಸಲು ತೆಗೆದಿದ್ದಾನೆ.
ಬಾಗಲಕೋಟೆ(ಅ.02): ಬರಗಾಲದಲ್ಲಿ ಏನು ಬೇಸಾಯ ಮಾಡುವುದು . ಇರುವ ಅಲ್ಪ ಸ್ವಲ್ಪ ನೀರಲ್ಲಿ ಹೇಗೆ ಬೆಳೆ ತೆಗೆಯುವುದು ಅಂತಾ ಅನ್ನಿಸುವಂತಿದೆ ಉತ್ತರ ಕರ್ನಾಟಕ ರೈತರ ಪರಿಸ್ಥಿತಿ. ಆದರೆ ಬರಗಾಲದಲ್ಲೂ ಇರುವ ಸ್ವಲ್ಪ ನೀರಿನಲ್ಲೇ ನಾಳೆ ಬೆಳೆದು ರೈತನೊಬ್ಬ ಭರಪೂರಾ ಫಸಲು ತೆಗೆದಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ರೈತ ಸದಾಶಿವ ತೇಲಿಯವರ ತೋಟದಲ್ಲಿ ಎತ್ತ ನೋಡಿದರೂ ಬಾಳೆಗಿಡಗಳು ತೋರಣಗಳಂತೆ ಫಸಲು ತುಂಬಿ ನಿಂತಿವೆ.
ಇದ್ದ ಅಲ್ಪ ಸ್ಪಲ್ಪ ನೀರಿನಲ್ಲೆ 2 ಎಕರೆ ಜಮೀನಿನಲ್ಲಿ ಜಿ-9 ಪ್ರಭೇದದ 2,700 ಬಾಳೆ ಸಸಿ ನೆಟ್ಟು ಇಂದು ಭರಪುರ ಫಲವತ್ತಾದ ಫಸಲು ಬೆಳೆದು ಮಾದರಿ ರೈತನೆನಿಸಿಕೊಂಡಿದ್ದಾನೆ. ನೀರಿನ ಅಭಾವದ ಪರಿಸ್ಥಿತಿಯಲ್ಲೂ ಹನಿ ನೀರಾವರಿ ಮೂಲಕ ಬಾಳೆ ಬೆಳೆ ಬೆಳೆದು ಸುತ್ತ ಮುತ್ತಲಿನ ರೈತರಿಗೆ ಮಾದರಿ ಅನ್ನಿಸುವಂತೆ ಫಸಲು ಪಡೆದಿದ್ದಾರೆ.
ಸದಾಶಿವ ತೇಲಿ ಅವರು ಬೆಳೆದ ಬಾಳೆ ಬೆಳೆಯನ್ನ ನೋಡಲು ಸುತ್ತಮುತ್ತಲಿನ ಗ್ರಾಮಗಳ ರೈತರು ಬರುತ್ತಿದ್ದಾರೆ. ಈ ಮಧ್ಯೆ ಸ್ಥಳೀಯ ಶಾಸಕ ಗೋವಿಂದ ಕಾರಜೋಳ ಸಹ ಹೊಲಕ್ಕೆ ಭೇಟಿ ನೀಡಿದ್ದು, ರೈತನ ಸಾಧನೆಯನ್ನ ಅಭಿಮಾನದ ಮೂಲಕ ಕೊಂಡಾಡಿದ್ರು.
ಒಟ್ನಲ್ಲಿ, ಬರಗಾಲ ಅಂತ ಸಾಲ ಸೋಲ ಮಾಡಿ ಕಂಗೆಡುವ ರೈತರ ಮಧ್ಯೆ ಇದ್ದಷ್ಟು ನೀರಿನಲ್ಲಿಯೇ 2 ಎಕರೆ ಪ್ರದೇಶದಲ್ಲಿ ಭರಪೂರ ಬಾಳೆ ಬೆಳೆದು ಇತರ ರೈತರಿಗೆ ಇವರು ಮಾದರಿಯಾಗಿದ್ದಾರೆ.
