ಪ್ರಕೃತಿಯಲ್ಲಿ ನಡೆಯುವ ಅನೇಕ ವೈಶಿಷ್ಟ್ಯಗಳು ಕೆಲವೊಂದು ಸಾರಿ ಪವಾಡಗಳನ್ನು ಸೃಷ್ಟಸುತ್ತವೆ, ವಿಜ್ಞಾನ ಮತ್ತು ವೈಜ್ಞಾನಿಕತೆಗೆ ಕೆಲವೊಂದು ವೈಶಿಷ್ಟ್ಯತೆಗಳು ಆಶ್ವರ್ಯವನ್ನ ಸೃಷ್ಟಿಮಾಡುತ್ತವೆ.
ಮೈಸೂರು(ಜು.30): ಪ್ರಕೃತಿಯಲ್ಲಿ ನಡೆಯುವ ಅನೇಕ ವೈಶಿಷ್ಟ್ಯಗಳು ಕೆಲವೊಂದು ಸಾರಿ ಪವಾಡಗಳನ್ನು ಸೃಷ್ಟಸುತ್ತವೆ, ವಿಜ್ಞಾನ ಮತ್ತು ವೈಜ್ಞಾನಿಕತೆಗೆ ಕೆಲವೊಂದು ವೈಶಿಷ್ಟ್ಯತೆಗಳು ಆಶ್ವರ್ಯವನ್ನ ಸೃಷ್ಟಿಮಾಡುತ್ತವೆ.
ಇಂಥ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರು ತಾಲೂಕಿನ ವರುಣಾ ಕ್ಷೇತ್ರದ ಸಜ್ಜೆ ಹುಂಡಿ ಗ್ರಾಮದ ಜನ.. ರಾಮಯ್ಯ ಹಾಗೂ ಕೆಂಪಯ್ಯ ದಂಪತಿ 2 ವರ್ಷಗಳ ಹಿಂದೆ ಹೆಚ್‌ಎಫ್ ತಳಿಯ ಹಸುವನ್ನು ಖರೀದಿಸಿದ್ದರು. ಅದು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಅದಕ್ಕೀಗ 2 ವರ್ಷ, ಇಲ್ಲಿ ಹಾಲು ಕೊಡ್ತಿರೋದು ಅದೇ ಕರು.
ಈ ಕರುವಿಗೆ ಗರ್ಬಧರಿಸಲೆಂದು ಇಂಜೆಕ್ಷನ್ ಕೊಡಿಸಿದ್ದರು. ಆದರೆ, ಇಂಜೆಕ್ಷನ್ ಪರಿಣಾಮನೋ ಏನೋ ಕೆಚ್ಚಲು ಬಂದು ಕರು ಹಾಲು ಕೊಡಲು ಪ್ರಾರಂಭಿಸಿದೆ. ಕರು ನೀಡುತ್ತಿರುವ ಹಾಲು ಉತ್ತಮ ಗುಣಮಟ್ಟದಾಗಿದ್ದು, ನಿತ್ಯವೂ ಹತ್ತಿರದ ಹಾಲಿನ ಡೈರಿಗೆ ನೀಡುತ್ತಿದ್ದಾರೆ.
ಇನ್ನು ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ಜನ ಕೆಂಪಯ್ಯನವರ ಮನೆಗೆ ಬರುತ್ತಿದ್ದಾರೆ. ಅದೇನೆ ಇರಲಿ ಸು ಗರ್ಭಧರಿಸಲಿ ಎಂದು ಇಂಜೆಕ್ಷನ್ ಕೊಡಿಸಿದ್ರೆ, ಆ ಹಸು ಹಾಲು ಕೊಡುತ್ತಿರುವುದೇ ನಿಜಕ್ಕೂ ವಿಸ್ಮಯವೇ.
