ಇತ್ತೀಚಿನ ದಿನಗಳಲ್ಲಿ ಮನುಷ್ಯರ ನಡುವೆ ಸಂಬಂಧಗಳು ಹಳಸಿ ಮಾನವೀಯ ಮೌಲ್ಯಗಳು ಕುಸಿದು ವೈರಿಗಳಂತೆ ಬದುಕು ಸಾಗಿಸುತ್ತಿರುವ ಮಧ್ಯೆ ಇಲ್ಲೊಂದು ಅಪರೂಪದ ಕುಟುಂಬವಿದ್ದು ನಾಯಿಯನ್ನು ಮಗಳಂತೆ ಸಾಕಿಕೊಂಡಿದ್ದು, ಅಕಾಲಿಕವಾಗಿ ಮರಣಕ್ಕೆ ತುತ್ತಾದ ಶ್ವಾನಕ್ಕೆ  ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿ ತಮ್ಮ ಶ್ವಾನ ಪ್ರೇಮವನ್ನು ಮೆರೆದಿದ್ದಾರೆ.

ಬೆಂಗಳೂರು[ನ.27] ರೆಬಲ್ ಸ್ಟಾರ್ ಅಂಬರೀಶ್ ಅಗಲಿಕೆಯಿಂದ ಅವರ ಮನೆಯ ನಾಯಿಗಳು ಕಣ್ಣೀರು ಹಾಕುತ್ತಿವೆ. ಈ ಶ್ವಾನ ಪ್ರೇಮವೇ ಹಾಗೆ.. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಪ್ರೀತಿಯ ಶ್ವಾನ ಅಕಾಲಿಕಿ ಸಾವಿಗೆ ತುತ್ತಾಗಿದ್ದರಿಂದ ಶ್ವಾನವನ್ನು ಸಕಲ ಗೌರವಗಳಿಂದ ಮಣ್ಣು ಮಾಡಿದೆ.

ಈ ಶ್ವಾನದ ಹೆಸರು ಜಾನು. ಐರ್ಲೆಂಡ್ ಬ್ರಾಂಡ್ ನ ಐರಿಷ್ ಶೆಟರ್ ಎಂಬ ಜಾತಿಯ ನಾಯಿಯನ್ನು ಬೆಂಗಳೂರು ಹೊರವಲಯ ಆವಲಹಳ್ಳಿಯ ಕಮಲ ಎಂಬುವರು ನಾಲ್ಕು ವರ್ಷಗಳಿಂದ ಸಾಕಿಕೊಂಡಿದ್ದರು. ಇತ್ತೀಚೆಗೆ ಕೆಲ ಕಿಡಿಗೇಡಿಗಳು ಈ ಶ್ವಾನವನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಗಾಯಗೊಳಿಸಿದ್ದರಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದೆ. ಕಮಲ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳಿರದಿದ್ದರಿಂದ ಜಾನು ನನ್ನು ತನ್ನ ಮಗಳಂತೆ ಪ್ರೀತಿಯಿಂದ ಸಾಕಿದ್ದರು, ಕೆ.ಆರ್.ಪುರ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುವ ಇವರು ಮನೆಯಲ್ಲಿನ ಪ್ರತಿಯೊಂದು ಕೆಲಸದಲ್ಲು ಜೊತೆಯಾಗಿರುತ್ತಿದ್ದ ಈ ಜಾನು ಉಳಿದ ಸಮಯದಲ್ಲಿ ಕಮಲ ರವರ ಇಬ್ಬರು ಮಕ್ಕಳು ಹಾಗೂ ಮನೆಯಲ್ಲಿದ್ದ ಎರಡು ಬೆಕ್ಕುಗಳ ಜೊತೆ ಆಟವಾಡಿಕೊಂಡು ಕಾಲ ಕಳೆಯುತ್ತಿತ್ತು, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ಈ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಇನ್ನೂ ತಮ್ಮ ಪ್ರೀತಿಯ ಶ್ವಾನವನ್ನು ಕಳೆದು ಕೊಂಡ ಕುಟುಂಬ ಮನುಷ್ಯರು ಸತ್ತಾಗ ಮಾಡುವ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿ ಬಿಳ್ಕೊಟ್ಟಿದ್ದಾರೆ. ನೂರಾರು ಮಂದಿಗೆ ಶ್ವಾನದ ಹೆಸರಲ್ಲಿ ಅನ್ನದಾನವನ್ನು ಮಾಡಿದ್ದಾರೆ. ನಮ್ಮ ತಾಯಿಗೆ ಪ್ರೀತಿಯ ಮಗಳಂತೆ ಇತ್ತು, ನಮ್ಮ ತಾಯಿ ಊಟ ಮಾಡಿಸಿದರೇ ಮಾತ್ರ ಮಾಡುತ್ತಿತ್ತು ಇಲ್ಲವಾದರೇ ಎಷ್ಟು ದಿನವಾದರೂ ಉಪವಾಸವಿರುತ್ತಿತ್ತು, ಅಷ್ಟರ ಮಟ್ಟಿಗೆ ತಾಯಿಯೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರಿಂದ ತನ್ನ ತಂಗಿಯ ಸಾವನ್ನು ಮರೆಯಲಾಗುತ್ತಿಲ್ಲವೆಂದು ಸಹೋದರ ಅಕ್ರಂದನ ವ್ಯಕ್ತಪಡಿಸಿದ್ದಾರೆ.

ಮರೆಯಾದ ಪತ್ತೆದಾರಿ, ಚಿಕ್ಕಮಗಳೂರಿನ ಪೊಲೀಸ್ ಶ್ವಾನ

ಒಟ್ಟಾರೆ ಮನುಷ್ಯರಲ್ಲಿನ ದ್ವೇಷ, ಅಸೂಯೆಗಳು ನಿತ್ಯ ನಿರಂತರವಾಗಿರುತ್ತವೆ. ಆದರೇ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯಗಳು ಎಷ್ಟು ನಿಷ್ಕಲ್ಮಷವಾಗಿರುತ್ತವೆ ಎಂಬುದಕ್ಕೆ ಇವರ ಶ್ವಾನ ಪ್ರೀತಿ ನಿದರ್ಶನವಾಗಿದೆ.