ಬಕ್ರೀದ್‌ ಹಬ್ಬದಂದು ಕುರಿ ಕಡಿಯುವುದು ಸಾಮಾನ್ಯ ಆಚರಣೆಯಾಗಿದೆ. ಆದರೆ ಉತ್ತರಪ್ರದೇಶದ  ಲಕ್ನೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಈ ಬಾರಿಯ ಬಕ್ರೀದ್‌ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಾಡಲು ನಿರ್ಧರಿಸಿದ್ದಾರೆ. 

ಲಕ್ನೋ : ಬಕ್ರೀದ್‌ ಹಬ್ಬದಂದು ಮುಸ್ಲಿಮರು ಕುರಿ ಕಡಿಯುವುದು ಸಾಮಾನ್ಯ. ಆದರೆ ಉತ್ತರಪ್ರದೇಶದ ಲಕ್ನೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಈ ಬಾರಿಯ ಬಕ್ರೀದ್‌ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಾಡಲು ನಿರ್ಧರಿಸಿದ್ದಾರೆ. 

ಹೌದು, ನಿಜವಾದ ಕುರಿ ಕಡಿಯುವ ಬದಲು ಹಬ್ಬದ ದಿನದಂದು, ಕುರಿಯ ಚಿತ್ರ ಇರುವ ಕೇಕ್‌ ಕತ್ತರಿಸುವ ಮೂಲಕ ಹಬ್ಬ ಆಚರಿಸುವುದಾಗಿ ಘೋಷಿಸಿದ್ದಾರೆ. ಅವರ ಈ ಕ್ರಮಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.