ಸಲ್ಮಾನ್’ಗೆ ಶಿಕ್ಷೆ ಆಗಿದ್ದೇ ಸರಿ ಎಂದ ಬಾಲಿವುಡ್ ನಟಿ

This Actress supports Salman Khans jail sentence
Highlights

ಈಗಾಗಲೇ ನಟ ಸಲ್ಮಾನ್ ಖಾನ್ ವಿರುದ್ಧ  ಜೋಧ್’ಪುರ ನ್ಯಾಯಾಲಯದಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಿದ್ದು,  5 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿದೆ.

ಮುಂಬೈ : ಈಗಾಗಲೇ ನಟ ಸಲ್ಮಾನ್ ಖಾನ್ ವಿರುದ್ಧ  ಜೋಧ್’ಪುರ ನ್ಯಾಯಾಲಯದಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಿದ್ದು,  5 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿದೆ. ಈಗಾಗಲೇ ಅನೇಕ ಸ್ಟಾರ್’ಗಳು ಬಾಲಿವುಡ್’ ನಟ ನಟಿಯರು ಸೇವ್ ಸಲ್ಮಾನ್ ಅಭಿಯಾನವನ್ನು ಆರಂಭ ಮಾಡಿದ್ದರು.

ಅನೇಕರಿಂದ ಸಲ್ಮಾನ್ ಖಾನ್’ಗೆ ಶಿಕ್ಷೆ ವಿಧಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದೂ ಕೂಡ ಮಾತುಗಳು ಕೇಳಿ ಬಂದಿದ್ದವು.

ಆದರೆ ಇಲ್ಲೋರ್ವ  ಬಾಲಿವುಡ್ ನಟಿ ಮಾತ್ರ ಸಲ್ಮಾನ್ ಖಾನ್’ಗೆ ಶಿಕ್ಷೆ ವಿಧಿಸಿದ್ದೇ ಸರಿ ಎಂದು ಹೇಳಿದ್ದಾರೆ. ನಟಿ ಸೂಫಿಯಾ ಹಯಾತ್ ತನ್ನ ಇನ್’ಸ್ಟಾಗ್ರಾಮ್’ನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದ್ದೇ ಸರಿ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ನನಗೆ ಯಾವುದೇ ರೀತಿಯಾದ ಭಯವಿಲ್ಲ ಎಂದು ಹೇಳಿದ್ದಾರೆ.

loader