ಈ ಎರಡೂ ಗ್ರಾಮಗಳ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಬಂದ್‌ ಸಂಪ್ರದಾಯವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರುತ್ತವೆ.
ಕೊಚ್ಚಿ: ರಾಜಕೀಯ ಸಂಘಟನೆಗಳು ಬಂದ್ಗೆ ಕರೆ ನೀಡಿದಾಗ ಪ್ರತಿಯೊಬ್ಬರಿಗೂ ಕಿರಿಕಿರಿಯಾಗುವುದು ಸಹಜ. ಆದರೆ ಕೇರಳದ ಕೊಚ್ಚಿಯ ಎರಡು ಗ್ರಾಮಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಬಂದ್ ನಡೆದಿಲ್ಲ ಎಂಬ ಕುತೂಹಲಕಾರಿ ವಿಷಯ ‘ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ರಾಜಕೀಯ ಪೈಪೋಟಿ ಹೊಂದಿರುವ ಕೇರಳದಲ್ಲಿ ಬಂದ್ಗಳು ಸರ್ವೇ ಸಾಮಾನ್ಯ ಎಂಬ ಭಾವನೆಯಿದೆ. ಬಂದ್ಗಳಿಗೆ ಸಂಘಟನೆಗಳು ಕರೆ ನೀಡಿದಾಗ ಸಾಮಾನ್ಯವಾಗಿ ನಗರಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗುವುದು ಸಹಜ. ಈ ಸಂದರ್ಭ ಬಂದ್ ಪರಿಣಾಮಕ್ಕೊಳಪಟ್ಟಜನರು ಬಂದ್ ಕರೆ ನೀಡಿದವರನ್ನು ಬೈಕೊಳ್ಳುವುದೂ ಸಾಮಾನ್ಯ. ಆದರೆ ಇಂಥ ಸನ್ನಿವೇಶದಲ್ಲಿ ಕೇರಳದ ಪೆರುಂಬವೂರ್ ಸಮೀಪದ ಪುಲ್ಲುವಳಿ ಮತ್ತು ವಲ್ಲಂ ಎಂಬ ಎರಡು ಗ್ರಾಮಗಳಲ್ಲಿ ಬಂದ್ ನಡೆಸದಿರಲು ಅವಿರೋಧ ನಿರ್ಣಯವನ್ನು ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ಪಾಲಿಸಿಕೊಂಡು ಬರಲಾಗಿದೆ.
ಈ ಎರಡೂ ಗ್ರಾಮಗಳ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಬಂದ್ ಸಂಪ್ರದಾಯವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರುತ್ತವೆ. ಇಲ್ಲಿ ಯಾರೊಬ್ಬರೂ ಬಂದ್ ನಡೆಸಲು ಬಲವಂತ ಮಾಡುವುದಿಲ್ಲ. ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಾದ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಕೇರಳ ಬಂದ್ಗೆ ಕರೆ ನೀಡಿದ್ದರೂ, ಪುಲ್ಲುವಳಿ ಮತ್ತು ವೆಲ್ಲಂ ಗ್ರಾಮಗಳಲ್ಲಿ ಬಂದ್ ನಡೆದಿಲ್ಲ. ಹೀಗಾಗಿ ಬಂದ್ ನಡೆಸದಿರುವ ತಮ್ಮ ಗ್ರಾಮಗಳ ನಿರ್ಣಯಕ್ಕೆ ಅವು ಮತ್ತೊಮ್ಮೆ ಬದ್ಧತೆಯನ್ನು ಪ್ರದರ್ಶಿಸಿದಂತಾಗಿದೆ.
ಬಂದ್ ನಡೆಯದ ನಾಡು
* ಕೇರಳದಲ್ಲಿ ಎಲ್ಲದಕ್ಕೂ ಬಂದ್ ನಡೆಯುವಾಗಲೂ, ಬಂದ್ ಸಂಪ್ರದಾಯದಿಂದ ದೂರ ಇರಲು ಸರ್ವಪಕ್ಷ ಮುಖಂಡರ ನಿರ್ಧಾರ
* ರಾಜ್ಯ ಬಂದ್'ಗೆ ಕರೆ ನೀಡಿದ್ದರೂ ಈ ಎರಡು ಹಳ್ಳಿಗಳಲ್ಲಿ ಮಾತ್ರ ಜನಜೀವನ ನಿರಾತಂಕ
* ಬಲವಂತವಾಗಿ ಬಂದ್ ಮಾಡುವವರಿಲ್ಲ.
* ಗುರುವಾರ ಬಿಜೆಪಿ ಕರೆ ನೀಡಿದ್ದ ಬಂದ್ಗೂ ಯಾವುದೇ ಪ್ರತಿಕ್ರಿಯೆ ಇಲ್ಲ.
(ಕೃಪೆ: ಕನ್ನಡಪ್ರಭ)
