ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ತಿರುವನಂತಪುರ ಹಾಗೂ ನಂತರದ ಸ್ಥಾನದಲ್ಲಿ ನಯಾ ರಾಯ್'ಪುರ್' ರಾಜ್'ಕೋಟ್, ಅಮರಾವತಿ ಹಾಗೂ ಪಾಟ್ನ ನಗರಗಳಿದ್ದ ಪಟ್ಟಣಗಳನ್ನು ಪ್ರಕಟಿಸಿದರು. ಈ ನಗರಗಳಿಗೆ ಮೂಲಸೌಕರ್ಯಕ್ಕಾಗಿ 46879 ಕೋಟಿ ರೂ. ತಂತ್ರಜ್ಞಾನ ಅಭಿವೃದ್ಧಿಗಾಗಿ 10514 ಕೋಟಿ ರೂ. ವ್ಯಯಿಸಲಾಗುತ್ತದೆ.
ನವದೆಹಲಿ(ಜೂ.23): ಕೇಂದ್ರ ಸರ್ಕಾರ ಸ್ಮಾರ್ಟ್ ನಗರ ಯೋಜನೆಯಡಿಯಲ್ಲಿ ದೇಶದ 30 ನೂತನ ಸ್ಮಾರ್ಟ್ ನಗರಗಳನ್ನು ಪ್ರಕಟಿಸಿದ್ದು, ಕೇರಳದ ತಿರುವನಂತಪುರ ಮೊದಲ ಪಟ್ಟಿಯಲ್ಲಿದ್ದರೆ ರಾಜ್ಯದ ಬೆಂಗಳೂರಿಗೂ ಸ್ಥಾನ ಪಡೆದಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ತಿರುವನಂತಪುರ ಹಾಗೂ ನಂತರದ ಸ್ಥಾನದಲ್ಲಿ ನಯಾ ರಾಯ್'ಪುರ್' ರಾಜ್'ಕೋಟ್, ಅಮರಾವತಿ ಹಾಗೂ ಪಾಟ್ನ ನಗರಗಳಿದ್ದ ಪಟ್ಟಣಗಳನ್ನು ಪ್ರಕಟಿಸಿದರು. ಈ ನಗರಗಳಿಗೆ ಮೂಲಸೌಕರ್ಯಕ್ಕಾಗಿ 46879 ಕೋಟಿ ರೂ. ತಂತ್ರಜ್ಞಾನ ಅಭಿವೃದ್ಧಿಗಾಗಿ 10514 ಕೋಟಿ ರೂ. ವ್ಯಯಿಸಲಾಗುತ್ತದೆ.
30 ಪಟ್ಟಣಗಳಲ್ಲಿ ಮಹಾರಾಷ್ಟ್ರದ 3, ಪಶ್ಚಿಮ ಬಂಗಾಳದ 3,ಗುಜರಾತ್'ನ 3, ಮಧ್ಯಪ್ರದೇಶದ 3, ಉತ್ತರ ಪ್ರದೇಶದ 6 ನಗರಗಳು ಸೇರಿವೆ. ಪ್ರತಿ ನಗರಗಳಿಗೂ 500 ಕೋಟಿ ರೂ.ನೀಡಲಾಗುತ್ತಿದ್ದು, ಕಳೆದ ವರ್ಷ ಬಿಡುಗಡೆ ಮಾಡಿದ ಪ್ರತಿ ನಗರಗಳಿಗೆ 400 ಕೋಟಿ ನೀಡಲಾಗಿತ್ತು. 2015ರ ಜೂನ್ 15ರಂದು ಸ್ಮಾರ್ಟ್ ನಗರ ಯೋಜನೆಯಡಿ 100 ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು.

30 ನಗರಗಳ ಪಟ್ಟಿ
1. ತಿರುವನಂತಪುರ : ಕೇರಳ
2. ನಯಾ ರಾಯ್‌ಪುರ: ಛತ್ತಿಸ್‌ಘಡ
3. ರಾಜ್‌ಕೋಟ್: ರಾಜಸ್ಥಾನ
4. ಅಮರಾವತಿ:ಆಧ್ರಪ್ರದೇಶ
5. ಪಟ್ನಾ: ಬಿಹಾರ
6. ಕರೀಂನಗರ: ತೆಲಂಗಾಣ
7. ಮುಜಾಫರ್‌ಪುರ: ಬಿಹಾರ
8. ಪುದುಚೇರಿ: ಪುದುಚೇರಿ:
9. ಗಾಂಧಿನಗರ: ಗುಜರಾತ್
10. ಶ್ರೀನಗರ: ಜಮ್ಮು ಮತ್ತು ಕಾಶ್ಮೀರ
11. ಸಾಗರ್: ಮಧ್ಯಪ್ರದೇಶ
12. ಕರ್ನಾಲ್: ಹರಿಯಾಣ
13. ಸತ್ನಾ: ಮಧ್ಯಪ್ರದೇಶ
14. ಬೆಂಗಳೂರು: ಕರ್ನಾಟಕ
15. ಶಿಮ್ಲಾ: ಹಿಮಾಚಲ ಪ್ರದೇಶ
16. ಡೆಹ್ರಾಡೂನ್: ಉತ್ತರಾಖಂಡ್
17. ತಿರುಪ್ಪೂರ್: ತಮಿಳುನಾಡು
18. ಪಿಂಪ್ರಿ ಚಿಂಚವಾಡ: ಮಹಾರಾಷ್ಟ್ರ
19. ಬಿಲಾಸ್‌ಪುರ: ಛತ್ತೀಸ್ಗಢ
20. ಪಸಿಘಾಟ್: ಅರುಣಾಚಲ ಪ್ರದೇಶ
21. ಜಮ್ಮು: ಜಮ್ಮು ಮತ್ತು ಕಾಶ್ಮೀರ
22. ದಾಹೋದ್: ಗುಜರಾತ್
23. ತಿರುನಲ್ವೇಲಿ: ತಮಿಳುನಾಡು
24. ತೂತುಕುಡಿ: ತಮಿಳುನಾಡು
25. ತಿರುಚಿರಾಪಳ್ಳಿ: ತಮಿಳುನಾಡು
26. ಝಾನ್ಸಿ: ಉತ್ತರ ಪ್ರದೇಶ
27. ಐಜ್ವಾಲ್: ಮಿಜೋರಾಮ್
28. ಅಲಹಾಬಾದ್: ಉತ್ತರ ಪ್ರದೇಶ
29. ಅಲಿಘಡ: ಉತ್ತರ ಪ್ರದೇಶ
30. ಗಾಂಗ್ಟಕ್ : ಸಿಕ್ಕಿಂ
