Asianet Suvarna News Asianet Suvarna News

ಕರ್ನಾಟಕ ಸಂಸದರಿಗೆ ಚಕ್ರವರ್ತಿ ಚಾಟಿ, ಮೊದಲು ಕೆಲಸ ಮಾಡೋದು ಕಲೀರಿ

ಎಷ್ಟೇ ದೊಡ್ಡ ಲೀಡ್ ನಿಂದ ಗೆದ್ದಿದ್ದರೂ ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ರಾಜ್ಯದ ಬಿಜೆಪಿ ಸಂಸದರಿಗೆ ಏಟು ನೀಡಿದ್ದಾರೆ.

Thinker chakravarthy-sulibele-hits-out-karnataka-bjp-mps
Author
Bengaluru, First Published Jun 28, 2019, 11:44 AM IST

ಬೆಂಗಳೂರು[ಜೂ. 28]  ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು ಅರಿತುಕೊಂಡು ಸಂಸದರು ಕೆಲಸ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚಕ್ರವರ್ತಿ,  ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಇವರೆಲ್ಲರ ಸೋಲು ಹೀನಾಯವಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಸೂಲಿಬೆಲೆ ‘ಗ್ರಾಮ ಸ್ವರ್ಗ’ ಚಾಲೆಂಜ್ ಸ್ವೀಕರಿಸಿದ ಇಬ್ಬರು ಸಂಸದರು

ನಾನು ಗೌಡನಾದ ಕಾರಣಕ್ಕೆ ಈ ಸ್ಥಾನಕ್ಕೆ ಬಂದೆ ಎನ್ನುತ್ತ ಸದಾನಂದಗೌಡ ಜಾತಿ ಹೆಸರು ಹೇಳಿಕೊಂಡು ಸಾಂಪ್ರದಾಯಿಕ ರಾಜಕಾರಣಕ್ಕೆ ಮತ್ತೆ ಅಡಿ ಇಡುತ್ತಿದ್ದಾರೆ ಹಾಗೆಯೇ ಎಮರ್ಜೆನ್ಸಿ ಆಸ್ಪತ್ರೆಗಾಗಿ ಉತ್ತರ ಕನ್ನಡದ ಜನ ಹೋರಾಟ ನಡೆಸುತ್ದಿದ್ದಾರೆ, ಅದಕ್ಕಾಗಿ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ ಮಾಡಿ ಮನವಿ ಸಲ್ಲಿಸಿದರು, ಈ ವೇಳೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ ರಾಜ್ಯಕ್ಕೆ ಸೇರಿರುವ ಕೆಲಸ ತಾನು ಮಾಡುವುದಿಲ್ಲ ಎಂದಿರುವುದು ವರದಿಯಾಗಿದೆ. ಜನಪ್ರತಿನಿಧಿಗಳು ಧಿಮಾಕಿನ ವರ್ತನೆ ಮೊದಲು ಬಿಡಬೇಕು ಎಂದು ಸೂಲಿಬೆಲೆ ಆಗ್ರಹಿಸಿದ್ದಾರೆ. 

 

Follow Us:
Download App:
  • android
  • ios