ಬೆಂಗಳೂರಿನಲ್ಲಿ ಒಂದು ಪ್ಲ್ಯಾಟ್ ಖರೀದಿ ಮಾಡಬೇಕು ಅಥವಾ ಸೈಟ್ ತಗೋಬೇಕು ಅಂತ ಆಲೋಚೆನೆಯಲ್ಲಿರುವವರು ಸ್ವಲ್ಪ ಎಚ್ಚರದಿಂದಿರಿ!. ಅದರಲ್ಲೂ ಬಿಡಿಎ ಸೈಟ್‌ಗಳನ್ನೋ ಅಥವ ಪ್ಲ್ಯಾಟ್‌ಗಳನ್ನು ಖರೀದಿಸಬೇಕು ಅಂತ ತೀರ್ಮಾನ ಮಾಡೋರು ಈ ಸುದ್ದಿಯನ್ನು ನೋಡಿ ನಂತರ ಕೊಂಡುಕೊಳ್ಳುವುದರ ಬಗ್ಗೆ ಯೋಚನೆ ಮಾಡಿ .

ಬೆಂಗಳೂರು (ಫೆ.23): ಬೆಂಗಳೂರಿನಲ್ಲಿ ಒಂದು ಪ್ಲ್ಯಾಟ್ ಖರೀದಿ ಮಾಡಬೇಕು ಅಥವಾ ಸೈಟ್ ತಗೋಬೇಕು ಅಂತ ಆಲೋಚೆನೆಯಲ್ಲಿರುವವರು ಸ್ವಲ್ಪ ಎಚ್ಚರದಿಂದಿರಿ!. ಅದರಲ್ಲೂ ಬಿಡಿಎ ಸೈಟ್‌ಗಳನ್ನೋ ಅಥವ ಪ್ಲ್ಯಾಟ್‌ಗಳನ್ನು ಖರೀದಿಸಬೇಕು ಅಂತ ತೀರ್ಮಾನ ಮಾಡೋರು ಈ ಸುದ್ದಿಯನ್ನು ನೋಡಿ ನಂತರ ಕೊಂಡುಕೊಳ್ಳುವುದರ ಬಗ್ಗೆ ಯೋಚನೆ ಮಾಡಿ .

 ದಿವಾಳಿಯಾಗಿದೆ ಬಿಡಿಎ ಆಸ್ತಿ ಅಡವಿಟ್ಟು ಕೋಟಿ ಕೋಟಿ ಸಾಲ

ಬಿಡಿಎ ಬಳಿ ಹಣವಿಲ್ಲದಿದ್ದರೂ ಸಾವಿರಾರು ಕೋಟಿ ರೂಪಾಯಿಯ ಸ್ಟೀಲ್ ಬಿಡ್ಜ್ ಕಾಮಗಾರಿಯನ್ನ ಕೈಗೆತ್ತುಕೊಂಡಿದೆ. ಸ್ಟೀಲ್ ಬ್ರಿಡ್ಜ್‌ ಕಾಮಗಾರಿಗಾಗಿ ಸಿ.ಎ.ಸೈಟ್‌ಗಳನ್ನ ಮಾರಿ ಹಣ ಹೊಂದಿಸುತ್ತೇವೆ ಅಂತ ಹೇಳೋ ಬಿಡಿಎ ಈಗಾಗಲೇ ಹಲವು ಸಿ.ಎ.ನಿವೇಶನಗಳನ್ನ ಬ್ಯಾಂಕ್‌ಗೆ ಅಡಮಾನವಿಟ್ಟೋರದನ್ನೇ ಮರೆತಂತಿದೆ. ಸದ್ಯ ಸುವರ್ಣ ನ್ಯೂಸ್ ಗೆ ಸಿಕ್ಕಿರೊ ಮಾಹಿತಿ ಪ್ರಕಾರ ಬಿಡಿಎ ವಿವಿಧ ಬ್ಯಾಂಕ್‌ಗಳಿಂದ ಒಟ್ಟು 572 ಕೋಟಿ ರೂಪಾಯಿ ಸಾಲ ಪಡೆದು ಅದಕ್ಕಾಗಿ ಪ್ರತಿ ತಿಂಗಳು ಕೋಟಿಗಟ್ಟಲೆ ಬಡ್ಡಿ ಕಟ್ಟುತ್ತಿದೆ. ದುರಾದೃಷ್ಟ ಅಂದ್ರೆ ಈಗಾಗಲೇ ಮಾರಾಟವಾಗಿರೋ ಹಲವು ಪ್ಲ್ಯಾಟ್‌ಗಳನ್ನೂ ಸಹ ಬಿಡಿಎ ಈ ಹಿಂದೆಯೇ ಅಡಮಾನವಿಟ್ಟಿದ್ದು ಅದನ್ನು ಜನರಿಗೆ ಹೇಳದೆ ಮಾರಾಟ ಮಾಡಿದೆ.

ಮಾರಾಟವಾಗಿರೋ ಸೈಟ್ ಗಳು

* ವಿಶ್ವೇಶ್ವರಯ್ಯ ಲೇಔಟ್‌ನ 150 ಸಿ.ಎ.ಸೈಟ್‌ಗಳು

* ಮಾಳಗಳದ ಪೇಸ್ 2 ರ ಅಪಾರ್ಟ್‌ಮೆಂಟ್‌ಗಳು

* ಆಲೂರು ಪೇಸ್ 2 ರ ಅಪಾರ್ಟ್‌ಮೆಂಟ್‌ಗಳು

* ವಲಗೇರಹಳ್ಳಿಯ ಪೇಸ್ 5 ರ ಅಪಾರ್ಟ್‌ಮೆಂಟ್‌ಗಳು

* ಕೊಮ್ಮಘಟ್ಟದ ಪೇಸ್ 2 ರ ಅಪಾರ್ಟ್‌ಮೆಂಟ್‌ಗಳು

* ಕುಣಿಮಿಣಿಕೆ ಪೇಸ್ 2 ರ ಅಪಾರ್ಟ್‌ಮೆಂಟ್‌ಗಳು

ಒಟ್ಟಿನಲ್ಲಿ ಬಿಡಿಎ ಬೆಂಗಳೂರಿನ ಜನರಿಗೆ ಮೋಸ ಮಾಡಿ ಹಣ ಮಾಡೋದ್ರಲ್ಲಿ ಎತ್ತಿದ ಕೈ ಅಂತ ಹೇಳಿದ್ರೆ ತಪ್ಪಾಗಲಾರದು. ಏನೇ ಆದ್ರು ಬಿಡಿಎನಲ್ಲಿ ಸೈಟ್ ಅಥವಾ ಪ್ಲ್ಯಾಟ್‌ಗಳನ್ನು ಕೊಳ್ಳುವ ಮುನ್ನ ಎಚ್ಚರವಿರಲಿ ಅನ್ನೋದೆ ಸದ್ಯ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರೊ ಮಾತು.