ನ್ಯಾ. ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್’ನ ನೂತನ ಮುಖ್ಯ ನ್ಯಾಯಾಧೀಶರಾಗಿ ಇಂದು ಅಧಿಕಾರ ಸ್ವಿಕರಿಸಿದ್ದಾರೆ. ಅವರ ಬಗ್ಗೆ ತಿಳಿದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ

ನ್ಯಾ. ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್’ನ ನೂತನ ಮುಖ್ಯ ನ್ಯಾಯಾಧೀಶರಾಗಿ ಇಂದು ಅಧಿಕಾರ ಸ್ವಿಕರಿಸಿದ್ದಾರೆ. ಅವರ ಬಗ್ಗೆ ತಿಳಿದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ

ನ್ಯಾ. ದೀಪಕ್ ಮಿಶ್ರಾ ಸುಪ್ರಿಂ ಕೋರ್ಟ್’ನ 45ನೇ ಸಿಜೆಯಾಗಿದ್ದಾರೆ.

ಇಂಗ್ಲಿಷ್ ಭಾಷೆಯಲ್ಲಿ, ದೇವರ ಮೇಲೆ ಪ್ರಮಾಣ ಮಾಡಿ ನ್ಯಾ. ಮಿಶ್ರಾ ಅಧಿಕಾರ ಸ್ವೀಕಾರ

ವಯಸ್ಸು 64 ವರ್ಷ ಪ್ರಾಯದ ಒಡಿಶಾ ಮೂಲದವರಾಗಿದ್ದು, ಆ ರಾಜ್ಯದಿಂದ ಸುಪ್ರೀಂಕೋರ್ಟ್‌'ನ ಜಡ್ಜ್​ ಆಗಿ ಆಯ್ಕೆಯಾದ 3ನೇ ವ್ಯಕ್ತಿಯಾಗಿದ್ದಾರೆ.

ಈ ಹಿಂದೆ ಪಾಟ್ನಾ ಹಾಗೂ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. 2011ರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಧೀಶರಾಗಿದ್ದರು.

ಸುಪ್ರೀಂಕೋರ್ಟ್ ಸಿಜೆಯಾಗಿ ಇವರ ಸೇವಾವಧಿ ಮುಂದಿನ ವರ್ಷ, ಅಂದ್ರೆ ಅಕ್ಟೋಬರ್ 2, 2018ರವರೆಗೆ ಮುಗಯಲಿದೆ.

ಕೊಟ್ಟ ಪ್ರಮುಖ ತೀರ್ಪುಗಳು
* ಸಿನಿಮಾ ಪ್ರದರ್ಶನಕ್ಕೆ ಮುನ್ನ ಎಲ್ಲ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಹಾಡಬೇಕು. ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದು ಆದೇಶಿಸಿದ್ದು.
* ರಾತ್ರೋರಾತ್ರಿ ವಿಚಾರಣೆ ನಡೆಸಿ ಮುಂಬೈ ಸ್ಫೋಟದ ಅಪರಾಧಿ, ಉಗ್ರ ಯಾಕೂಬ್‌ ಮೆಮನ್‌ನ ಗಲ್ಲುಶಿಕ್ಷೆ ಎತ್ತಿಹಿಡಿದಿದ್ದು.
* ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ದು.
* ಮಹಿಳೆಯರಿಗೂ ಕೇರಳದ ಶಬರಿಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಆದೇಶಿಸಿದ್ದು.
* ದೇಶಾದ್ಯಂತ ಅಶ್ಲೀಲ ಚಿತ್ರಗಳಿರುವ ವೆಬ್‌ಸೈಟುಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಸರ್ಕಾರಕ್ಕೆ ಸೂಚಿಸಿದ್ದು.

ಮುಂದಿರುವ ಸವಾಲುಗಳು:
* ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ:
* ಕಾವೇರಿ ಪ್ರಕರಣ
* ಸೆಬಿ-ಸಹಾರಾ ಪ್ರಕರಣ
* ಬಿಸಿಸಿಐ ಬಿಕ್ಕಟ್ಟು
* ಪನಾಮಾ ಪೇಪರ್ ಸೋರಿಕೆ
* ಖಾಸಗಿತನದ ಹಕ್ಕು ಕಾಯ್ದೆ