ಸೇಫ್ ಇಲ್ಲ ಸಿಲಿಕಾನ್ ಸಿಟಿ! ಮಾಜಿ ಯೋಧನ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು

First Published 28, Feb 2018, 11:53 AM IST
Thief attack on Former Soldier
Highlights

ಮಾಜಿ ಯೋಧರಿಗೂ ಸೇಫ್ ಇಲ್ಲದಂದಾಯ್ತು ಸಿಲಿಕಾನ್ ಸಿಟಿ!  ಕೆಲಸ  ಮುಗಿಸಿ  ಮನೆಗೆ  ತೆರಳುತ್ತಿದ್ದ ನಿವೃತ್ತ ಯೋಧನ ಮೇಲೆ ದರೋಡೆಕೋರರು ದಾಳಿ ಮಾಡಿದ್ದಾರೆ. 

ಬೆಂಗಳೂರು (ಫೆ. 28): ಮಾಜಿ ಯೋಧರಿಗೂ ಸೇಫ್ ಇಲ್ಲದಂದಾಯ್ತು ಸಿಲಿಕಾನ್ ಸಿಟಿ!  ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನಿವೃತ್ತ ಯೋಧನ ಮೇಲೆ ದರೋಡೆಕೋರರು ದಾಳಿ ಮಾಡಿದ್ದಾರೆ. 

ಸತೀಶ್ ಎಂಬ ನಿವೃತ್ತ ಯೋಧನ ಮೇಲೆ ಅಟ್ಯಾಕ್  ಮಾಡಿದ ಇಬ್ಬರು ದುಷ್ಕರ್ಮಿಗಳು ಚಾಕು ತೋರಿಸಿ ಹಣ ದರೋಡೆ ಮಾಡಲು ಪ್ರಯತ್ನಿಸಿದ್ದಾರೆ.  ನಿನ್ನೆ ರಾತ್ರಿ 12.40 ರ ಸುಮಾರಿಗೆ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ.   ಕೆಂಗೇರಿ ಬಳಿಯ ನಾಗದೇವನಹಳ್ಳಿ ಬಸ್ ನಿಲ್ದಾಣದ ಬಳಿ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. 

ಬಿಡದಿಯ ಟಯೋಟ ಲಾಜಿಸ್ಟೀಕ್ ಕಿಶೋರ್ ಕಂಪನಿಯಲ್ಲಿ  ನಿವೃತ್ತ ಯೋಧ ಸತೀಶ್  ಕೆಲಸ ಮಾಡುತ್ತಿದ್ದರು. ಈ ವೇಳೆ ಸತೀಶ್ ಕೂಗಾಡಿದಾಗ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.  ಘಟನೆಯ ಸಂಪೂರ್ಣ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 

loader