ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ: ಸಿಎಂ

First Published 18, Jan 2018, 5:08 PM IST
They are not only Hindus who going to Temple
Highlights

ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಜ.18): ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಷ್ಟುದಿನ ದುಡಿದುಕೊಂಡು ತಿಂದವರು ಕೆಲ ದಿನ ದುಡಿಯದೇ ತಿಂದರೆ ಏನ್ ತಪ್ಪು ? ಬಡವರು ಕೆಲ ದಿನ ರೆಸ್ಟ್ ಮಾಡ್ಲಿ ಬಿಡಿ ಎಂದು  ತಮ್ಮ ಮಹತ್ವಾಕಾಂಕ್ಷೆಯ  ಅನ್ನ ಭಾಗ್ಯ ಯೋಜನೆಯನ್ನು  ಸಮರ್ಥಿಸಿಕೊಂಡಿದ್ದಾರೆ.   ಸಂಪ್ರದಾಯದ ಹೆಸರಲ್ಲಿ ಕಂದಾಚಾರ ,ಮೌಡ್ಯಗಳು ಹೆಚ್ಚಾಗುತ್ತಿವೆ.   ನನ್ನ ಕಾರಿನ ಮೇಲೆ ಕಾಗೆ ಕುಳಿತರೆ  ಅದನ್ನ ಶನಿ ಕಾಟ ಅಂತಾ ಕರೆದರು.  ಪಾಪ ಆ ಕಾಗೆಗೆ ಒಂದು ಕಣ್ಣು ಕಾಣ್ತಿರ್ಲಿಲ್ಲಾ ಹಾಗಾಗಿ  ನನ್ನ ಕಾರಿನ ಮೇಲೆ  ಕುಳಿತಿತ್ತು.  ಈ ಮೌಡ್ಯಗಳನ್ನ ತಡೆಯಲು ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದೇವೆ. ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ, ಮನುಷ್ಯತ್ವ ಇಲ್ಲದವನು ಹಿಂದೂ ಆಗಲಾರ.  ಮಾಧ್ಯಮಗಳೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.

loader