ಬೆಂಗಳೂರು(ಮೇ. 10)  ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದೆ. ಆದರೆ ಹೊಸ ಸಿಎಂ ಕೂಗು ಆಗಾಗ ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ ನ ಅಗ್ರ ನಾಯಕರ ಆದಿಯಾಗಿ ಅನೇಕರು ತಾವೇ ರೇಸ್ ನಲ್ಲಿ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾರೆಲ್ಲ ಆಕಾಂಕ್ಷಿ ಎಂದಿದ್ದಾರೆ?

ಸಿದ್ದರಾಮಯ್ಯ: ಸಿದ್ದರಾಮಯ್ಯ ತಾವೇ ಸ್ವತಃ ಎಲ್ಲೂ ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿಲ್ಲ. ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ಚೆಲುವರಾಯಸ್ವಾಮಿ ಸೇರಿದಂತೆ ಕೆಲವರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ.

ಪರಮೇಶ್ವರ: ರಾಜ್ಯದ ದೋಸ್ತಿ ಸರಕಾರದಲ್ಲಿ ಡಿಸಿಎಂ ಆಗಿರುವ ಪರಮೇಶ್ವರ ಅವರು ಸಿಎಂ ಪೋಸ್ಟ್ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ಮಾತನಾಡುತ್ತ ಪರೋಕ್ಷವಾಗಿ ನಾನು ರೇಸ್ ನಲ್ಲಿ ಇದ್ದೇನೆ ಎಂದಿದ್ದಾರೆ.

ಸತೀಶ್ ಜಾರಕಿಹೊಳಿ: ಈ ಹೆಸರು ಹೊಸ ಸೇರ್ಪಡೆ. ಆದರೆ ನಾನು ಸಿಎಂ ಆಗುವ ಕಾಲವಿದೆ. ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ದೇನೆ ಎಂದು  ಹೇಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಮಲ್ಲಿಕಾರ್ಜುನ ಖರ್ಗೆ: ಉತ್ತರ ಕರ್ನಾಟಕದ ನಾಯಕರೊಬ್ಬರು ಸಿಎಂ ಆಗಬೇಕು ಎಂಬ ಒತ್ತಾಯ ಕಾಂಗ್ರೆಸ್ ಆಂತರಿಕ ವಲಯದಲ್ಲೇ ಕೇಳಿಬರುತ್ತಿದೆ. ಅವರ ಮೊದಲ ಆಯ್ಕೆ ಮಲ್ಲಿಕಾರ್ಜುನ ಖರ್ಗೆ.

ಡಿಕೆ ಶಿವಕುಮಾರ್ : ಟ್ರಬಲ್ ಶೂಟರ್ ಎಂದು ಕರೆಸುಕೊಂಡಿರುವ ಡಿಕೆಶಿ ಸಹ ಸಿಎಂ ರೇಸ್ ಬಗ್ಗೆ ಮಾತನಾಡಿದ ಉದಾಹರಣೆ ಇದೆ. ಅದರಲ್ಲಿಯೂ ಯಾರೂ ಸನ್ಯಾಸಿಗಳಲ್ಲ ಎಂದು ಡಿಕೆಶಿ ಪದೇ ಪದೇ ಹೇಳುತ್ತಿರುವುದರ ಗೂಡಾರ್ಥ ಮಾತ್ರ ಗೊತ್ತಾಗಿಲ್ಲ.