ಮಂಜುನಾಥ ಒರಿಸ್ಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಯೋಧನ ತಾಯಿ ರಾಮಲಕ್ಷ್ಮಮ್ಮ, ತಂದೆ ಸಣ್ಣಪಯ್ಯ ಸಣ್ಣ ಅಂಗಡಿ ನಡೆಸುತ್ತಿದ್ದರು. ಆದರೆ ಮೂರು ತಿಂಗಳ ಹಿಂದೆ ಈ ಅಂಗಡಿಗೆ ಯಾರೋ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ.
ಪಾವಗಡ(ನ.22): ದೇಶದ ರಕ್ಷಣೆಗಾಗಿ ಹಗಲುರಾತ್ರಿ ಎನ್ನದೆ ತನ್ನ ಜೀವವನ್ನೇ ಪಣಕಿಟ್ಟು ದುಡಿಯುವ ಯೋಧನ ಕುಟುಂಬಕ್ಕೆ ರಾಜ್ಯದಲ್ಲೇ ರಕ್ಷಣೆ ಇಲ್ಲದಂತಾಗಿದೆ.
ಹೌದು, ತುಮಕೂರಿನ ಪಾವಗಡದ ಹೌಸಿಂಗ್ ಬೋರ್ಡ್'ನಲ್ಲಿ ಯೋಧನ ಕುಟುಂಬ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮಂಜುನಾಥ್ ಕುಟುಂಬಕ್ಕೆ ಸೇರಿದ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಮಂಜುನಾಥ ಒರಿಸ್ಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಯೋಧನ ತಾಯಿ ರಾಮಲಕ್ಷ್ಮಮ್ಮ, ತಂದೆ ಸಣ್ಣಪಯ್ಯ ಸಣ್ಣ ಅಂಗಡಿ ನಡೆಸುತ್ತಿದ್ದರು. ಆದರೆ ಮೂರು ತಿಂಗಳ ಹಿಂದೆ ಈ ಅಂಗಡಿಗೆ ಯಾರೋ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ.
ಲಕ್ಷ್ಮಿನರಸಮ್ಮ ಹಾಗೂ ರಾಮಕೃಷ್ಣ ಎಂಬುವರ ಮೇಲೆ ಪಾವಗಡ ಪೊಲೀಸ್ ಠಾಣೆಗೆ ಯೋಧನ ತಂದೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ತನಿಖೆ ನಡೆಸುತ್ತಿಲ್ಲ, ಇನ್ನೂ ಲಕ್ಷ್ಮಿನರಸಮ್ಮ ಹಾಗೂ ರಾಮಕೃಷ್ಣಯ್ಯನವರು ಯೋಧನ ಪೋಷಕರ ಮೇಲೆ ನಿತ್ಯ ಕಿರುಕುಳ ಮುಂದುವರಿಸುತ್ತಿದ್ದಾರಂತೆ. ಅಂಗಡಿ ಜಾಗ ಬಿಟ್ಟುಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ. ನ್ಯಾಯಕ್ಕಾಗಿ ಯೋಧನ ಕುಟುಂಬ ನಿತ್ಯ ಕಣ್ಣರಿನಲ್ಲೇ ಕೈ ತೊಳೆಯುವಂತಾಗಿದೆ.
