ಬೆಂಗಳೂರು (ಫೆ.11): ರಾಯಣ್ಣ ಬ್ರಿಗೇಡ್​’ಗೆ ಬ್ರೇಕ್ ಬಿತ್ತು ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ರಾಯಣ್ಣ ಬ್ರಿಗೇಡ್​’ಗೆ ಬ್ರೇಕ್ ಇಲ್ಲ, ಏನೂ ಇಲ್ಲ. ನಾನು ನೇರವಾಗಿಯೇ ಇದರಲ್ಲಿ ಭಾಗವಹಿಸುತ್ತೇನೆ ಎಂದು ವಿಧಾನ ಪರಿಷತ್ ನಲ್ಲಿ ​ ವಿಪಕ್ಷ ನಾಯಕ ಈಶ್ವರಪ್ಪ ಹೇಳಿದ್ದಾರೆ.

ಪಕ್ಷಕ್ಕೆ ಧಕ್ಕೆಯಾಗದಂತೆ ಬ್ರಿಗೇಡ್ ಚಟುವಟಿಕೆ ನಡೆಯುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೂಡ ಇದನ್ನೇ ಹೇಳಿದ್ದಾರೆ. ಯಡಿಯೂರಪ್ಪ ಕೂಡಾ ಅಂದು ಒಪ್ಪಿಕೊಂಡಿದ್ದಾರೆ. ಇಂದಿನ ಸಭೆಯಲ್ಲಿ ಬ್ರಿಗೇಡ್​ ‘ನ ಮುಂದಿನ ಕಾರ್ಯಚಟುವಟಿಕೆ ಬಗ್ಗೆ ಚರ್ಚೆ ನಡೆಸಲಾಗುವುದು. ಬಿಜೆಪಿಗೂ ಬ್ರಿಗೇಡ್​ಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.