Asianet Suvarna News Asianet Suvarna News

ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಖದೀಮರ ಕೈಚಳಕ: ಸ್ಫೂರ್ತಿ ಬಾರ್'ನಲ್ಲಿ ಮದ್ಯ ಕದ್ದ ಖದೀಮರು

ಬೆಂಗಳೂರಿನಲ್ಲಿ ಕಳ್ಳಕಾಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಚಿನ್ನಾಭರಣ ಕದಿಯುತ್ತಿದ್ದ ಖದೀಮರು ಇದೀಗ ಮದ್ಯ ಕದಿಯಲು ಶುರು ಮಾಡಿಕೊಂಡಿದ್ದಾರೆ. ಇಲ್ಲೊಂದು ಜನನಿಬಿಡ ಪ್ರದೇಶದ ಬಾರ್'ವೊಂದರಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್​​ ಠಾಣಾ ವ್ಯಾಪ್ತಿಯ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ಸ್ಫೂರ್ತಿ ಬಾರ್​​ನಲ್ಲಿ ಕಳ್ಳರು ಕೇವಲ ನಾಲ್ಕಿಂಚು ಅಂತವಿರುವ ಸರಳನ್ನು ಹಿಗ್ಗಿಸಿ ಬಾರ್​​ ಒಳಗೆ ನುಗ್ಗಿದ್ದಾರೆ.

Theft In Liquor Shop
  • Facebook
  • Twitter
  • Whatsapp

ಬೆಂಗಳೂರು(ಮೇ.11): ಬೆಂಗಳೂರಿನಲ್ಲಿ ಕಳ್ಳಕಾಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಚಿನ್ನಾಭರಣ ಕದಿಯುತ್ತಿದ್ದ ಖದೀಮರು ಇದೀಗ ಮದ್ಯ ಕದಿಯಲು ಶುರು ಮಾಡಿಕೊಂಡಿದ್ದಾರೆ. ಇಲ್ಲೊಂದು ಜನನಿಬಿಡ ಪ್ರದೇಶದ ಬಾರ್'ವೊಂದರಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್​​ ಠಾಣಾ ವ್ಯಾಪ್ತಿಯ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ಸ್ಫೂರ್ತಿ ಬಾರ್​​ನಲ್ಲಿ ಕಳ್ಳರು ಕೇವಲ ನಾಲ್ಕಿಂಚು ಅಂತವಿರುವ ಸರಳನ್ನು ಹಿಗ್ಗಿಸಿ ಬಾರ್​​ ಒಳಗೆ ನುಗ್ಗಿದ್ದಾರೆ.

ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ದೊಣ್ಣೆ ಹಾಗೂ ತಂತಿಯ ಸಹಾಯದಿಂದ  ಕಿಟಕಿಯ ಸರಳನ್ನ ಸದ್ದೇ ಆಗದಂತೆ ಹಿಗ್ಗಿಸಿದ್ದಾರೆ. ಕೇವಲ ಐದಿಂಚು ಜಾಗದಲ್ಲೆ  ನುಸುಳಿರುವ ಖದೀಮ ಸುಮಾರು 10 ನಿಮಿಷಗಳ ಕಾಲ ಇಡೀ ಬಾರ್​ ತಡಕಾಡಿದ್ದಾನೆ. 8 ಸಾವಿರ ರೂಪಾಯಿ ನಗದು ಜೊತೆಗೆ 10 ಸಾವಿರ ಮೌಲ್ಯದ ಮದ್ಯವನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.

ಬಾರ್​'​ಗೆ ಕನ್ನ ಹಾಕಿದ್ದನ್ನು ಕಂಡು ಬೆಚ್ಚಿಬಿದ್ದ ಬಾರ್​ ಮಾಲೀಕ ಮುನಿರಾಜ್​​ ಮಹಾಲಕ್ಷ್ಮೀಲೇಔಟ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪಕ್ಕದ ಬಟ್ಟೆ ಅಂಗಡಿಯ ಶೆಟರ್​​ ಮುರಿದು ಗಲ್ಲಾ ಪೆಟ್ಟಿಗೆಯಲ್ಲಿದ್ದ ಚಿಲ್ಲರೇ ಕಾಸನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಇನ್ನೂ  ಮುಖ್ಯ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ 8ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ದೂರು ನೀಡಿದ್ರೂ, ಪೊಲೀಸರು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಇನ್ನಾದರೂ ಪೊಲೀಸರು, ಸರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಳ್ಳರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.

Follow Us:
Download App:
  • android
  • ios