ಸಿಲಿಕಾನ್ ಸಿಟಿಯಲ್ಲಿ ಅಪರಿಚಿತರಿಗೆ ರೂಮ್ ನೀಡುವ ಮುನ್ನ ಎಚ್ಚರ..!

First Published 22, Jan 2018, 10:51 AM IST
Theft In Hotel Bengaluru Hotel Room
Highlights

ಸಿಲಿಕಾನ್ ಸಿಟಿಯಲ್ಲಿ ಹೋಟೆಲ್, ಲಾಡ್ಜ್’ನಲ್ಲಿ ರೂಮ್ ನೀಡುವ ಮುನ್ನ ಎಚ್ಚರ ವಹಿಸಿ. ಯಾಕೆಂದರೆ ಇಲ್ಲಿ ಉಳಿದುಕೊಳ್ಳುವ ನೆಪದಲ್ಲಿ ಬಂದು ರೂಮ್’ನಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾರೆ.

ಬೆಂಗಳೂರು (ಜ.22): ಸಿಲಿಕಾನ್ ಸಿಟಿಯಲ್ಲಿ ಹೋಟೆಲ್, ಲಾಡ್ಜ್’ನಲ್ಲಿ ರೂಮ್ ನೀಡುವ ಮುನ್ನ ಎಚ್ಚರ ವಹಿಸಿ. ಯಾಕೆಂದರೆ ಇಲ್ಲಿ ಉಳಿದುಕೊಳ್ಳುವ ನೆಪದಲ್ಲಿ ಬಂದು ರೂಮ್’ನಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾರೆ.

ಇದೇ ರೀತಿ ಎಚ್ಎಸ್’ಆರ್ ಲೇಔಟ್’ನಲ್ಲಿ  ಬಾಡಿಗೆ ಪಡೆದ ಕಳ್ಳನೊಬ್ಬ ರೂಮ್’ನಲ್ಲಿದ್ದ ಎಲ್ಇಡಿ ಟಿವಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.

ಬಿಜಿನೆಸ್ ವಿಚಾರವಾಗಿ ನಾಲ್ಕು ದಿನಗಳಿಗೆ ರೂಮನ್ನು ಪಡೆದುಕೊಂಡು ಈ ಕೃತ್ಯ ಎಸಗಿದ್ದಾನೆ. ಜನವರಿ 3ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೇವರಾಜ್ ಎಂಬ ಹೆಸರಿನಲ್ಲಿ  ಐಡಿ ಕಾರ್ಡ್ ನೀಡಿ ಆತ ರೂಮನ್ನು ಪಡೆದುಕೊಂಡಿದ್ದ. ಮತ್ತೆ ಜನವರಿ 8ರಂದು ಇದೇ ಕಳ್ಳ ಬಾಗಲಕೋಟೆಯ 4 ಲಾಡ್ಜ್’ನಲ್ಲಿಯೂ 8 ಎಲ್ಇಡಿ ಟಿವಿ ಕಳ್ಳತನ ಮಾಡಿದ್ದನೆನ್ನಲಾಗಿದೆ.

loader